ನವದೆಹಲಿ: ಕೇಂದ್ರ ಸರ್ಕಾರದಿಂದ ಅನೂರ್ಜಿತ ಮತ್ತು ಶೂನ್ಯ ಎಂದು ಪರಿಗಣಿಸಲ್ಪಟ್ಟಿರುವ ಆದೇಶಗಳನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊರಡಿಸಿದರೆ ಅದನ್ನು ಪಾಲಿಸುವುದು ಬೇಡ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದ್ದಾರೆ.
ಈ ಬಗ್ಗೆ ಪತ್ರ ಹೊರಡಿಸಿರುವ ಅವರು, ಡಿಎಎನ್ಐಸಿಎಸ್ ಅಧಿಕಾರಿಗಳ ವೇತನ ಬದಲಾವಣೆ, ತನಿಖಾ ಸಮಿತಿ ಮುಂತಾದುವುಗಳ ಬಗ್ಗೆ ಆದೇಶ ಹೊರಡಿಸಿರುವ ದೆಹಲಿ ಸರ್ಕಾರ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದೆ, ಈ ಆದೇಶಗಳನ್ನು ಯಾವ ಅಧಿಕಾರಿಗಳೂ ಪಾಲಿಸಬಾರದು ಎಂದಿದ್ದಾರೆ.
ಅಲ್ಲದೇ ಯಾವುದಾದರೂ ಅಧಿಕಾರಿಗಳು ಈ ರೀತಿ ಮಾಡುವುದು ಕಂಡು ಬಂದರೆ ಅವರ ವಿರುದ್ಧ ಶಿಸ್ತಕ್ರಮ ಕೈಗೊಳ್ಳಬೇಕಾಗುತ್ತದೆ, ಅಲ್ಲದೇ ಸರ್ಕಾರಕ್ಕೆ ಅದರಿಂದ ಉಂಟಾದ ನಷ್ಟವನ್ನು ಸರ್ಕಾರಿ ಅಧಿಕಾರಿಗಳಿಂದಲೇ ಭರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಜ್ರಿವಾಲ್ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಜಂಗ್ ಮತ್ತು ಎಎಪಿ ನಡುವೆ ಸಮರ ಏರ್ಪಟ್ಟಿದೆ, ಇದೀಗ ಜಂಗ್ ಆದೇಶ ಮತ್ತೊಂದು ಸುತ್ತಿನ ಜಂಗಿಕುಸ್ತಿಗೆ ಅನುವು ಮಾಡಿಕೊಡುವುದರಲ್ಲಿ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.