ನವದೆಹಲಿ: ಭಾರತೀಯ ಸೇನೆ ಮತ್ತು ಉಜ್ಬೇಕಿಸ್ಥಾನ ಸೇನೆಯ ನಡುವಿನ ಮಿಲಿಟರಿ ಟು ಮಿಲಿಟರಿ ವಿನಿಮಯ ಕಾರ್ಯಕ್ರಮದ ಭಾಗವಾಗಿ, ನಾಲ್ಕನೇ ಆವೃತ್ತಿಯ ದ್ವೈವಾರ್ಷಿಕ ತರಬೇತಿ ವ್ಯಾಯಾಮ DUSTLIK (2023) ಇಂದಿನಿಂದ ಮಾರ್ಚ್ 5ರವರೆಗೆ ಉತ್ತರಾಖಂಡ್ನ ಪಿಥೋರಗಢದಲ್ಲಿ ನಡೆಯಲಿದೆ.
ಈ ದ್ವಿಪಕ್ಷೀಯ ಅಭ್ಯಾಸದಲ್ಲಿ ವೆಸ್ಟರ್ನ್ ಕಮಾಂಡ್ನ ಭಾಗವಾಗಿರುವ 14 ನೇ ಬೆಟಾಲಿಯನ್ ಗರ್ವಾಲ್ ರೈಫಲ್ಸ್ ಭಾರತೀಯ ತುಕಡಿಯನ್ನು ಪ್ರತಿನಿಧಿಸುತ್ತದೆ. ಉಜ್ಬೇಕಿಸ್ತಾನ್ ಸೈನ್ಯವನ್ನು ಉಜ್ಬೇಕಿಸ್ತಾನ್ ಸೇನೆಯ ವಾಯುವ್ಯ ಮಿಲಿಟರಿ ಪಡೆಗಳು ಪ್ರತಿನಿಧಿಸುತ್ತವೆ.
ಈ ಜಂಟಿ ವ್ಯಾಯಾಮವು ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಉಪ-ಸಾಂಪ್ರದಾಯಿಕ ಸನ್ನಿವೇಶದಲ್ಲಿ ಬಹು-ಡೊಮೈನ್ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.