News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‌ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆಯಲ್ಲಿ ಭಾರತದ ಸಮುದ್ರ ಆಹಾರ ರಫ್ತು

ನವದೆಹಲಿ: ಸಾಂಕ್ರಾಮಿಕ ಸೇರಿದಂತೆ ಇತರ ಕಾರಣಗಳಿಂದ ಕಳೆದ ಮೂರು ವರ್ಷಗಳಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತದ ಸಮುದ್ರ ಆಹಾರಗಳ ರಫ್ತು ಈ ಬಾರಿ ಮತ್ತೆ ಚೇತರಿಕೆಯನ್ನು ಕಂಡಿದೆ. ದೇಶದ ಸಮುದ್ರಾಹಾರ ರಫ್ತು FY 2022-23 ರಲ್ಲಿ US $ 8 ಶತಕೋಟಿಯ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

2021-22ರ ಅವಧಿಯಲ್ಲಿ, ಭಾರತವು ರೂಪಾಯಿ 575.86 ಶತಕೋಟಿ ಮೌಲ್ಯದ 13,69,264 ಟನ್‌ಗಳಷ್ಟು ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡಿದೆ. ಸೀಗಡಿ ಉತ್ಪಾದನೆಯು ಒಂದು ಮಿಲಿಯನ್ ಮಿಲಿಯನ್‌ ಟನ್ ದಾಟಿದೆ. ಘನೀಕೃತ ಸೀಗಡಿ ಪ್ರಮಾಣ ಮತ್ತು ಮೌಲ್ಯದಲ್ಲಿ ಪ್ರಮುಖ ರಫ್ತು ವಸ್ತುವಾಗಿ ಉಳಿದಿದ್ದು ಪ್ರಮಾಣದಲ್ಲಿ 53 ಪ್ರತಿಶತ ಮತ್ತು ಒಟ್ಟು ಆದಾಯದ 75 ಪ್ರತಿಶತದಷ್ಟು ಪಾಲನ್ನು ಹೊಂದಿದೆ.

ಸುಸ್ಥಿರ ಮೀನುಗಾರಿಕೆ ವಿಧಾನಗಳು, ಮೌಲ್ಯವರ್ಧನೆ, ವೈವಿಧ್ಯೀಕರಣದ ಮೂಲಕ ಹೆಚ್ಚಿದ ಜಲಕೃಷಿ ಉತ್ಪಾದನೆ ಮತ್ತು  ಬಹುಮುಖಿ ಕಾರ್ಯತಂತ್ರದ ಮೂಲಕ ಹೊಸ ಎತ್ತರವನ್ನು ಸಾಧಿಸುವ ಆಶಾವಾದವನ್ನು ಹೊಂದಿದ್ದೇವೆ ಎಂದು ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (MPEDA) ಅಧ್ಯಕ್ಷರು ಹೇಳಿದ್ದಾರೆ.

“ಇದಲ್ಲದೆ, ಮೀನು ಲಿಪಿಡ್ ಎಣ್ಣೆ, ಫಿಶ್ ಮೀಲ್, ಕ್ರಿಲ್ ಮೀಲ್, ಮಿನರಲ್ ಮತ್ತು ವಿಟಮಿನ್ ಪ್ರಿಮಿಕ್ಸ್‌ನಂತಹ ಪದಾರ್ಥಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸುವುದು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸ್ಪರ್ಧಾತ್ಮಕತೆಯನ್ನು ಒದಗಿಸುತ್ತದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top