News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೇಜಸ್‌ ಮಾರಾಟಕ್ಕಾಗಿ ಈಜಿಪ್ಟ್‌, ಅರ್ಜೇಂಟೀನಾ ಜೊತೆ ಭಾರತ ಮಾತುಕತೆ

ನವದೆಹಲಿ: ಭಾರತವು ಈಜಿಪ್ಟ್ ಮತ್ತು ಅರ್ಜೆಂಟೀನಾದೊಂದಿಗೆ ದೇಶೀಯವಾಗಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ (ಎಲ್‌ಸಿಎ) ಮಾರಾಟಕ್ಕಾಗಿ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರತವು ವಿದೇಶಿ ಮಾರುಕಟ್ಟೆಗಳಲ್ಲಿ ಹಿಡಿತ ಸಾಧಿಸಲು ಮತ್ತು ರಕ್ಷಣಾ ರಫ್ತುಗಳನ್ನು ಹೆಚ್ಚಿಸಲು ಗಮನವನ್ನು ತೀಕ್ಷ್ಣಗೊಳಿಸುತ್ತಿದ್ದು, ತೇಜಸ್ ಲಘು ಯುದ್ಧ ವಿಮಾನ ಮಾರಾಟಕ್ಕೆ ಸಂಬಂಧಿಸಿದಂತೆ ಈಜಿಪ್ಟ್ ಮತ್ತು ಅರ್ಜೆಂಟೀನಾ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಧ್ಯಕ್ಷ ಸಿಬಿ ಅನಂತಕೃಷ್ಣನ್ ಮಂಗಳವಾರ ಏರೋ ಇಂಡಿಯಾ-2023 ರಲ್ಲಿ ಹೇಳಿದ್ದಾರೆ.

ಈಜಿಪ್ಟ್‌ಗೆ 20 ವಿಮಾನಗಳ ಅವಶ್ಯಕತೆ ಇದೆ ಎಂದು ಅಂದಾಜಿಸಿದ್ದು, ದಕ್ಷಿಣ ಅಮೆರಿಕದ ಅರ್ಜೆಂಟೀನಾ ದೇಶಕ್ಕೆ 15 ಹೊಸ ಫೈಟರ್‌ಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

“ಈಜಿಪ್ಟ್ ಸ್ಥಳೀಯ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ರಚಿಸಲು ಆಸಕ್ತಿ ತೋರಿಸಿದೆ. ಅದನ್ನು ಸುಲಭಗೊಳಿಸಲು ನಾವು ಸಹಾಯ ಮಾಡುತ್ತೇವೆ. ಅರ್ಜೆಂಟೀನಾದ ವಾಯುಪಡೆಯ ಎರಡು ತಂಡಗಳು ಎಚ್‌ಎಎಲ್‌ಗೆ ಭೇಟಿ ನೀಡಿ ಎಲ್‌ಸಿಎ ಹಾರಾಟ ನಡೆಸಿವೆ” ಎಂದು ಅನಂತಕೃಷ್ಣನ್ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top