ವಾಷಿಂಗ್ಟನ್: ಕಳೆದ ವರ್ಷ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಪ್ರಧಾನಿ ಜವಾಬ್ದಾರಿಯನ್ನು ಹೊತ್ತುಕೊಂಡ ಬಳಿಕ ನರೇಂದ್ರ ಮೋದಿಯವರ ಫೇವರೇಬಿಲಿಟಿ ರೇಟಿಂಗ್ (ಅನುಕೂಲಕರ ಶ್ರೇಯಾಂಕ)ನಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಪ್ಯೂ ಸರ್ವೇಯಿಂದ ತಿಳಿದು ಬಂದಿದೆ.
ಮೋದಿಯವರ ನೀತಿಗಳು ಮತ್ತು ಆಡಳಿತ ಕೇವಲ ಭಾರತದ ಘನತೆಯನ್ನು ಮಾತ್ರ ಹೆಚ್ಚಿಸಲಿಲ್ಲ, ಬದಲಿಗೆ ಅವರ ಪರವಾದ ಅಲೆಯನ್ನೂ ಹೆಚ್ಚಿಸಿದೆ. ಪ್ರಸ್ತುತ ಅವರ ಫೆವರೇಬಿಲಿಟಿ ರೇಟಿಂಗ್ ಶೇ.87ಕ್ಕೆ ಜಿಗಿತ ಕಂಡಿದೆ ಎಂದು ಸರ್ವೇ ತನ್ನ ವರದಿಯಲ್ಲಿ ತಿಳಿಸಿದೆ.
ಎಪ್ರಿಲ್ 6ರಿಂದ ಮೇ 19ರ ಒಳಗೆ ಪ್ಯೂ ತನ್ನ ಸಮೀಕ್ಷೆಯನ್ನು ನಡೆಸಿದ್ದು, ಭಾರತದ ಒಟ್ಟು ೨,೪೫೨ ಮಂದಿಯನ್ನು ಸಮೀಕ್ಷೆಗೊಳಪಡಿಸಿದೆ.
ಆದರೆ ಮೋದಿಯ ಮೊದಲ ಆಡಳಿತದ ಐದು ತಿಂಗಳ ಅವಧಿಯಲ್ಲಿ ಕೋಮು ಸಂಘರ್ಷಗಳು ಅತ್ಯಧಿಕ ಪ್ರಮಾಣದಲ್ಲಿ ನಡೆದಿದೆ. ಕಾಂಗ್ರೆಸ್ ಆಡಳಿತದ ಮೊದಲ ಅವಧಿಗೆ ಗಮನಿಸಿದರೆ ಇದರ ಪ್ರಮಾಣ ಸಾಕಷ್ಟು ಹೆಚ್ಚಿದೆ ಎಂದು ಅದು ತಿಳಿಸಿದೆ.
ಕಾಂಗ್ರೆಸ್ ಭದ್ರಕೋಟೆಯಂತಿದ್ದ ಗ್ರಾಮೀಣ ಭಾರತದಲ್ಲೂ ಮಹತ್ವದ ಬದಲಾವಣೆಯಾಗಿದ್ದು, ಗ್ರಾಮೀಣ ಜನತೆ ಬಿಜೆಪಿ ಮತ್ತು ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಪ್ರಸ್ತುತ ಪ್ರಧಾನಿ ಬಿಜೆಪಿ ಬೆಂಬಲಿಗರು ಮಾತ್ರವಲ್ಲದೇ ಕಾಂಗ್ರೆಸ್ ಬೆಂಬಲಿಗರಿಂದಲೂ ಬೆಂಬಲವನ್ನು ಪಡೆಯುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಮೋದಿಯವರ ಉಗ್ರ ವಿರೋಧಿ ಕಾರ್ಯವನ್ನು ಶೇ.56ರಷ್ಟು ಕಾಂಗ್ರೆಸ್ಸಿಗರು, ಅವರ ಭ್ರಷ್ಟಾಚಾರ ವಿರೋಧಿ ಕಾರ್ಯವನ್ನು ಶೇ. 56ರಷ್ಟು ಕಾಂಗ್ರೆಸ್ಸಿಗರು ಶ್ಲಾಘಿಸಿದ್ದಾರೆ ಎಂದು ಅದು ಹೇಳಿದೆ.
ಗ್ರಾಮೀಣ ಭಾಗದಲ್ಲಿ ಮೋದಿ ಶೇ.86ರಷ್ಟು , ರಾಹುಲ್ ಗಾಂಧೀ ಶೇ.66ರಷ್ಟು ಜನಪ್ರಿಯತೆ ಪಡೆದಿದ್ದಾರೆ. ನಗರ ಪ್ರದೇಶದಲ್ಲಿ ಮೋದಿ ಶೇ.84ರಷ್ಟು ಮತ್ತು ರಾಹುಲ್ ಶೇ.53ರಷ್ಟು ಜನಪ್ರಿಯತೆ ಪಡೆದಿದ್ದಾರೆ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.