News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

3 ವರ್ಷದಲ್ಲಿ ಭಾರತದ ಸ್ಥಳೀಯ ರಕ್ಷಣಾ ಉತ್ಪಾದನೆ ಮೌಲ್ಯ 2.58 ಲಕ್ಷ ಕೋಟಿ ರೂ: ಕೇಂದ್ರ

ನವದೆಹಲಿ: ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಭಾರತದ ಸ್ಥಳೀಯ ರಕ್ಷಣಾ ಉತ್ಪಾದನೆಯು 2.58 ಲಕ್ಷ ಕೋಟಿ ರೂಪಾಯಿ ತಲುಪಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

2019-20 ರಿಂದ 2021-22 ರವರೆಗಿನ ರಕ್ಷಣಾ ಉತ್ಪಾದನಾ ಡೇಟಾವನ್ನು ಶುಕ್ರವಾರ ಲೋಕಸಭೆಯಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಮಂಡಿಸಿದರು.

“ಕಳೆದ ಮೂರು ಹಣಕಾಸು ವರ್ಷಗಳಲ್ಲಿ 2019-20, 2020-21 ಮತ್ತು 2021-2022 ರಲ್ಲಿ ಸ್ವದೇಶಿ ರಕ್ಷಣಾ ಉತ್ಪಾದನೆಯ ಮೌಲ್ಯವು ಕ್ರಮವಾಗಿ ರೂ 79,071 ಕೋಟಿ, ರೂ 84,643 ಕೋಟಿ ಮತ್ತು ರೂ 94,846 ಕೋಟಿಗಳಾಗಿದೆ. ಇದು ಒಟ್ಟು 2,58,560 ಕೋಟಿ ರೂಪಾಯಿಗಳು” ಎಂದಿದ್ದಾರೆ.

“ದೇಶದಲ್ಲಿ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ, ಭಾರತ ಸರ್ಕಾರವು ಎರಡು ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳನ್ನು (ಡಿಐಸಿ) ಸ್ಥಾಪಿಸಿದೆ, ಒಂದು ಉತ್ತರ ಪ್ರದೇಶ ಮತ್ತು ಇನ್ನೊಂದು ತಮಿಳುನಾಡಿನಲ್ಲಿದೆ” ಎಂದು ಅವರು ಹೇಳಿದರು.

ಅಂದಾಜಿನ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಶಸ್ತ್ರಾಸ್ತ್ರ ಖರೀದಿಗೆ ಸುಮಾರು USD 130 ಬಿಲಿಯನ್  ಖರ್ಚು ಮಾಡುವ ನಿರೀಕ್ಷೆಯಿದೆ ಎಂದಿದ್ದಾರೆ.

ಆಮದು ಮಾಡಿಕೊಂಡ ಸೇನಾ ಪರಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವತ್ತ ಸರ್ಕಾರವು ಗಮನಹರಿಸಿದೆ ಮತ್ತು ದೇಶೀಯ ರಕ್ಷಣಾ ಉತ್ಪಾದನೆಯನ್ನು ಬೆಂಬಲಿಸಲು ನಿರ್ಧರಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top