News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡ್ರಗ್ಸ್‌ ಅನ್ನು ಪರೋಕ್ಷ ಯುದ್ಧದ ಸಾಧನವಾಗಿಸಿದೆ ಪಾಕಿಸ್ಥಾನ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ತನ್ನ ಪರೋಕ್ಷ ಯುದ್ಧವನ್ನು ಮುಂದುವರೆಸಲು ಪಾಕಿಸ್ಥಾನ ಈಗ ಮಾದಕ ದ್ರವ್ಯವನ್ನು ಹೊಸ ಸಾಧನವಾಗಿ ಬಳಸುತ್ತಿದೆ. ಹೀಗಾಗಿ ಕಾಶ್ಮೀರವು ಮಾದಕ-ಭಯೋತ್ಪಾದನೆಯಲ್ಲಿ ಹೆಚ್ಚಳವನ್ನು ಕಾಣುತ್ತಿದೆ ಎಂದು ಹಿರಿಯ ಸೇನಾ ಕಮಾಂಡರ್  ಹೇಳಿದ್ದಾರೆ.

ಸೇನೆಯ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್  ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಾತನಾಡಿ, ಜಮ್ಮು-ಕಾಶ್ಮೀರದ ಸಾಮಾಜಿಕ ರಚನೆಯನ್ನು ಅಡ್ಡಿಪಡಿಸುವ ಪ್ರಯತ್ನವಾಗಿ ಪಾಕಿಸ್ಥಾನವು ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಡ್ರೋನ್‌ಗಳ ಮೂಲಕ ಕಳುಹಿಸುತ್ತಿದೆ ಎಂದಿದ್ದಾರೆ.

ಅಲ್ಲದೇ ಈ ಕಾರಣದಿಂದ ಆಂತರಿಕ ಮತ್ತು ಬಾಹ್ಯ ಭದ್ರತಾ ರಂಗಗಳಲ್ಲಿ ವಿವಿಧ ಸವಾಲುಗಳಿಗೆ ಸಿದ್ಧರಾಗಿರಲು ಉತ್ತರ ಕಮಾಂಡ್‌ನ ಎಲ್ಲಾ ಶ್ರೇಣಿಗಳಿಗೆ ಅವರು ಕರೆ ನೀಡಿದ್ದಾರೆ.

“ಕಾಶ್ಮೀರವು ಮಾದಕ ಭಯೋತ್ಪಾದನೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಏಕೆಂದರೆ ಪಾಕಿಸ್ಥಾನವು ಈಗ ತನ್ನ ಪರೋಕ್ಷ ಯುದ್ಧದಲ್ಲಿ ಇದನ್ನು ಹೊಸ ಸಾಧನವಾಗಿ ಬಳಸುತ್ತಿದೆ. ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಡ್ರೋನ್‌ಗಳ ಮೂಲಕ ಕಳುಹಿಸುವ ಕುಟಿಲ ತಂತ್ರವನ್ನು ಬಳಸಲಾಗುತ್ತಿದೆ. ಸಾಮಾಜಿಕ ರಚನೆಯನ್ನು ಅಡ್ಡಿಪಡಿಸುವ ಪ್ರಯತ್ನವನ್ನು ನಿರಂತರಗೊಳಿಸಿದೆ ”ಎಂದು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top