ನವದೆಹಲಿ: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯ ಪೋಸ್ಟಲ್ ಸ್ಟ್ಯಾಂಪ್ಗಳನ್ನು ನಿಲ್ಲಿಸಲು ಎನ್ಡಿಎ ಸರ್ಕಾರ ಮುಂದಾಗಿರುವುದನ್ನು ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯಾ ಕಟ್ಜು ಅವರು ಬೆಂಬಲಿಸಿದ್ದಾರೆ.
ಈ ಬಗ್ಗೆ ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿರುವ ಅವರು, ನಾನು ಬಿಜೆಪಿ ಸರ್ಕಾರದ ಅಭಿಮಾನಿಯಲ್ಲ, ಆದರೂ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸ್ಟ್ಯಾಂಪ್ಗಳನ್ನು ಮುಂದುವರೆಸದೇ ಇರಲು ಅದು ನಿರ್ಧರಿಸಿರುವುದನ್ನು ನಾನು ಶ್ಲಾಘಿಸುತ್ತೇನೆ ಎಂದಿದ್ದಾರೆ.
‘ಇಂದಿರಾ ಗಾಂಧಿಯವರು ಅಧಿಕಾರದಾಹಿ ಮಹಿಳೆ, ತನ್ನ ಅಧಿಕಾರಿವನ್ನು ಉಳಿಸಿಕೊಳ್ಳಲು ಅವರು ಯಾವ ಹಂತಕ್ಕೂ ಹೋಗಲು ಸಿದ್ಧರಿದ್ದರು. ಭ್ರಷ್ಟ ಚುನಾವಣಾ ಆರೋಪದಡಿ ಅವರನ್ನು ಅಲಹಾಬಾದ್ ಹೈಕೋರ್ಟ್ ತಪ್ಪಿತಸ್ಥೆ ಎಂದು ತೀರ್ಪು ನೀಡಿತ್ತು, ಹೀಗಾಗಿ ಅವರು 1975ರಲ್ಲಿ ನಕಲಿ ಎಮೆರ್ಜೆನ್ಸಿಯನ್ನು ವಿಧಿಸಿದರು’ ಎಂದಿದ್ದಾರೆ.
ರಾಜೀವ್ ಗಾಂಧಿಯವರೂ ಭಾರತೀಯ ಸೇನೆಯನ್ನು ಕಾರಣವಿಲ್ಲದೆ ಶ್ರೀಲಂಕಾಗೆ ಕಳುಹಿಸಿದರು, ಇದರಿಂದ ನಮ್ಮ ಸಾವಿರಾರು ಯೋಧರು ಸಾವಿಗೀಡಾದರು ಎಂದಿದ್ದಾರೆ.
ಇಂತಹ ಅಧಿಕಾರಿದಾಹಿಗಳಿಗೆ ಗೌರವದ ಅಗತ್ಯವಿಲ್ಲ ಎಂದು ಕಟ್ಜು ಪ್ರತಿಪಾದಿಸಿದ್ದಾರೆ.
ರಾಜೀವ್ ಗಾಂಧಿ, ಇಂದಿರಾ ಗಾಂಧಿ ಸ್ಟ್ಯಾಂಪನ್ನು ಒಳಗೊಂಡ ಆಧುನಿಕ ಭಾರತದ ನಿರ್ಮಾತೃಗಳು ಥೀಮ್ನ್ನು ಎನ್ಡಿಎ ಸರ್ಕಾರ ಬದಲಿಸಿದೆ, ಗಾಂಧೀಜಿ, ಅಂಬೇಡ್ಕರ್, ಮದರ್ ಥೆರೇಸಾ, ಜವಹಾರ್ ಲಾಲ್ ನೆಹರೂ ಸ್ಟ್ಯಾಂಪನ್ನು ಮುಂದುವರೆಸಿದೆ.
ತನ್ನ ಹೊಸ ಥೀಮ್ನಲ್ಲಿ ಸರ್ಕಾರ, ಶ್ಯಾಮ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ, ನೇತಾಜೀ ಸುಭಾಷ್ ಚಂದ್ರ ಬೋದ್, ಸರ್ದಾರ್ ವಲ್ಲಭಾ ಭಾಯ್ ಪಟೇಲ್, ಶಿವಾಜಿ, ಮೌಲಾನಾ ಆಝಾದ್, ಭಗತ್ ಸಿಂಗ್, ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ವಿವೇಕಾನಂದ, ಮಹಾರಾಣಾ ಪ್ರತಾಪ್ ಅವರ ಸ್ಟ್ಯಾಂಪ್ಗಳನ್ನು ಪರಿಚಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.