News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕರ್ತವ್ಯಪಥದಲ್ಲಿ ಭಾರತದ ಮಿಲಿಟರಿ ಶಕ್ತಿಯ ಅನಾವರಣ

ನವದೆಹಲಿ: ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಇಂದು ಆಚರಿಸುತ್ತಿದೆ ಮತ್ತು ಪ್ರತಿ ವರ್ಷದಂತೆ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ತನ್ನ ಮಿಲಿಟರಿ ಪರಾಕ್ರಮ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಿದೆ. ವಿಶೇಷವೆಂದರೆ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಹೊಸದಾಗಿ ಮರುನಾಮಕರಣಗೊಂಡ ಕರ್ತವ್ಯ ಪಥದಲ್ಲಿ ನಡೆಯುವ ಮೊದಲ ಗಣರಾಜ್ಯೋತ್ಸವ ಪರೇಡ್ ಇದಾಗಿದೆ.

74ನೇ ಗಣರಾಜ್ಯೋತ್ಸವ ಪರೇಡ್ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಮಾತ್ರವಲ್ಲದೆ ದೇಶದ ಸೇನಾ ಶಕ್ತಿಯನ್ನೂ ಪ್ರದರ್ಶಿಸುವ ಮೂಲಕ ಹಲವು ವಿಧಗಳಲ್ಲಿ ವಿಶಿಷ್ಟವಾಗಿತ್ತು. ಸೇನಾ ತುಕಡಿಗಳು ಮತ್ತು ಇತರ ಸಿಬ್ಬಂದಿಗಳು ಕರ್ತವ್ಯ ಪಥದಲ್ಲಿ ಮೆರವಣಿಗೆ ನಡೆಸುತ್ತಿದ್ದಂತೆ ರಾಷ್ಟ್ರ ರಾಜಧಾನಿ ಶಿಸ್ತು ಮತ್ತು ಕಠಿಣತೆಯ ಅದ್ಭುತ ಪ್ರಸ್ತುತಿಗೆ ಸಾಕ್ಷಿಯಾಯಿತು. ಮಿಲಿಟರಿ ಉಪಕರಣಗಳಾದ ಆಕಾಶ್ ರಾಡಾರ್ ಸಿಸ್ಟಮ್ ಅಥವಾ ಆಕಾಶ್ ವೆಪನ್ ಸಿಸ್ಟಮ್ ಅನ್ನು ಕೂಡ ಪ್ರದರ್ಶಿಸಲಾಗಿದೆ. ಇದು ಪಾಕಿಸ್ತಾನ ವಾಯುಪಡೆಯ ಯಾವುದೇ ದುಸ್ಸಾಹಸವನ್ನು ಎದುರಿಸಲು ನಿಯೋಜಿಗೊಂಡ ಉಪಕರಣಗಳಾಗಿವೆ.

 ಸ್ವದೇಶಿ ನಿರ್ಮಿತ HAL ತೇಜಸ್ LCA, ಸುಖೋಯ್ Su-30MKI ಅನ್ನು ಸಹ ಪ್ರದರ್ಶಿಸಲಾಗಿದೆ.

ಆಕಾಶ್ ಕ್ಷಿಪಣಿ ವ್ಯವಸ್ಥೆ, ಉಪಗ್ರಹಗಳು, ಮಾಡ್ಯುಲರ್ ಸೇತುವೆಗಳು, ಟವ್ಡ್ ಗನ್‌ಗಳು, ಯುಟಿಲಿಟಿ ಹೆಲಿಕಾಪ್ಟರ್‌ಗಳು, ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳು ಮತ್ತು ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಗಳಂತಹ ವೇದಿಕೆಗಳನ್ನು ಪ್ರದರ್ಶಿಸಿ ಭಾರತೀಯ ಸೇನೆಯ ಮಾರಕತೆ, ನಿಖರತೆ ಮತ್ತು ವಿಶ್ವಾಸಾರ್ಹತೆ ಪ್ರತಿಬಿಂಬಿಸಲಾಗಿದೆ.

ಈ ವರ್ಷ, ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಕೇವಲ ಮೇಡ್-ಇನ್-ಇಂಡಿಯಾ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪ್ರದರ್ಶಿಸಲಾಯಿತು ಮದ್ದುಗುಂಡುಗಳು ಸೇರಿದಂತೆ ಭಾರತದ ಸ್ವದೇಶೀಕರಣದ ಶಕ್ತಿಯನ್ನು ಪ್ರದರ್ಶಿಸಲಾಯಿತು, ಇದರಲ್ಲಿ `ಮೇಡ್ ಇನ್ ಇಂಡಿಯಾ’ 105 ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳ ಮೂಲಕ 21 ಗನ್ ಸೆಲ್ಯೂಟ್ ಸೇರಿದಂತೆ, ಇತ್ತೀಚೆಗೆ ಸೇರ್ಪಡೆಗೊಂಡ ಎಲ್‌ಸಿಎಚ್ ಪ್ರಚಂಡ್, ಕೆ. -9 ವಜ್ರ ಹೊವಿಟ್ಜರ್‌ಗಳು, MBT ಅರ್ಜುನ್, ನಾಗ್ ಆಂಟಿ-ಟ್ಯಾಂಕ್ ಮಾರ್ಗದರ್ಶಿ ಕ್ಷಿಪಣಿಗಳು, ಆಕಾಶ್ ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ಗಳು ಪ್ರದರ್ಶಿತಗೊಂಡಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top