News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಐಎನ್‌ಎಸ್‌ ವಗೀರ್‌ ಭಾರತೀಯ ನೌಕಾಸೇನೆಗೆ ಸೇರ್ಪಡೆ

ಮುಂಬಯಿ: ಐದನೇ ಕಲ್ವರಿ ದರ್ಜೆಯ ಜಲಾಂತರ್ಗಾಮಿ ಐಎನ್‌ಎಸ್ ವಗೀರ್ ಇಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.

ಫ್ರಾನ್ಸ್ ಮೂಲದ ನೇವಲ್ ಗ್ರೂಪ್ ಸಹಯೋಗದೊಂದಿಗೆ ಮುಂಬೈನ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಭಾರತದಲ್ಲಿ ನಿರ್ಮಿಸಿದ ಈ ಜಲಾಂತರ್ಗಾಮಿ ನೌಕೆಯನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ನೌಕಾಪಡೆಗೆ ನಿಯೋಜನೆಗೊಳಿಸಿದ್ದಾರೆ.

ಇಲ್ಲಿಯವರೆಗಿನ ಎಲ್ಲಾ ಸ್ಥಳೀಯವಾಗಿ ತಯಾರಿಸಿದ ಜಲಾಂತರ್ಗಾಮಿ ನೌಕೆಗಳಲ್ಲಿ ಅತ್ಯಂತ ಕಡಿಮೆ ನಿರ್ಮಾಣ ಸಮಯವನ್ನು ವಗೀರ್ ತೆಗೆದುಕೊಂಡಿರುವುದು ವಿಶೇಷತೆಯಾಗಿದೆ.

ಮೇಲ್ಮೈ ವಿರೋಧಿ ಯುದ್ಧ, ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ ಸಂಗ್ರಹಣೆ ಮತ್ತು ಕಣ್ಗಾವಲು ಕಾರ್ಯಾಚರಣೆಗಳು ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಮರ್ಥವಾಗಿರುವ ವಗೀರ್ ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಜಲಾಂತರ್ಗಾಮಿ ನೌಕೆಯ ನೀತಿಗೆ ಸಮಾನಾರ್ಥಕವಾಗಿರುವ ಎರಡು ಗುಣಗಳಾದ ‘ಸ್ಟೆಲ್ತ್ ಮತ್ತು ಫಿಯರ್‌ಲೆಸ್‌ನೆಸ್’ ಅನ್ನು ಪ್ರತಿನಿಧಿಸುವ ಸ್ಯಾಂಡ್ ಶಾರ್ಕ್‌ನ ಹೆಸರನ್ನು ಇದಕ್ಕೆ ಹೆಸರಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top