News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವದೇಶ್‌ ದರ್ಶನ್‌ 2.0 ಅಡಿ ದೇಶದ 36 ಪ್ರವಾಸಿ ಸ್ಥಳಗಳ ಆಯ್ಕೆ

ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ್ ದರ್ಶನ್ 2.0 ರ ಮೊದಲ ಹಂತದಲ್ಲಿ ಅಭಿವೃದ್ಧಿಸಲು 36 ಪ್ರವಾಸಿ ಸ್ಥಳಗಳನ್ನು ಆಯ್ಕೆಮಾಡಿದೆ. ಸ್ವದೇಶ್‌ ದರ್ಶನ್‌ ಎಂಬುದು ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಒಳಗೊಳ್ಳುವ ಮೂಲಸೌಕರ್ಯ ನವೀಕರಣಕ್ಕಾಗಿ ಕೇಂದ್ರದ ಯೋಜನೆಯಾಗಿದೆ.

ಆಯ್ಕೆಯಾದ ಸ್ಥಳಗಳಿಗೆ ಮಾಸ್ಟರ್ ಪ್ಲಾನ್ ತಯಾರಿಸಲು ಸಲಹೆಗಾರರನ್ನು ನೇಮಿಸುವ ಪ್ರಕ್ರಿಯೆಯನ್ನು ಸಚಿವಾಲಯವು ಪ್ರಾರಂಭಿಸಿದೆ. ವಿವರವಾದ ಯೋಜನಾ ವರದಿಯನ್ನು ಕೂಡ ಸಿದ್ಧಪಡಿಸಲಾಗುತ್ತದೆ. ಕೇಂದ್ರದಿಂದ ಹಣವನ್ನು ಒದಗಿಸುವ ವಿವಿಧ ಏಜೆನ್ಸಿಗಳ ಮೂಲಕ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

ಆಯ್ಕೆಯಾದ 36 ಪ್ರವಾಸಿ ಸ್ಥಳಗಳು ದೇಶದ  19 ರಾಜ್ಯಗಳಲ್ಲಿ ಇವೆ. ಈ ಪಟ್ಟಿಯಲ್ಲಿ ಗಂಡಿಕೋಟಾ (ಆಂಧ್ರಪ್ರದೇಶ), ಕೊಕ್ರಜಾರ್ (ಆಸಾಂ), ನಳಂದಾ (ಬಿಹಾರ), ಚಂಡೀಗಢ, ಧೋಲವೀರ (ಗೋವಾ), ಹಂಪಿ (ಕರ್ನಾಟಕ), ನಿಯುಲ್ಯಾಂಡ್ (ನಾಗಾಲ್ಯಾಂಡ್) ಮತ್ತು ಮಾಮಲ್ಲಪುರಂ (ತಮಿಳುನಾಡು) ಸೇರಿವೆ.

ಸ್ವದೇಶ್ ದರ್ಶನ್ 2.0 ಯೋಜನೆಯು ಪ್ರವಾಸೋದ್ಯಮವನ್ನು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಪ್ರಮುಖ ಎಂಜಿನ್‌ನಂತೆ ಇರಿಸುವ ಗುರಿಯನ್ನು ಹೊಂದಿದೆ, ಇದರಡಿ ಪ್ರವಾಸಿ ಸಾಮರ್ಥ್ಯವನ್ನು ಹೊಂದಿರುವ ಸರ್ಕ್ಯೂಟ್‌ಗಳನ್ನು ಯೋಜಿತ ಮತ್ತು ಆದ್ಯತೆಯ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top