News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಎಸ್: ನ್ಯಾಟೋ ಅಲ್ಲದ ಮಿತ್ರ ಸ್ಥಾನಮಾನದಿಂದ ಪಾಕಿಸ್ಥಾನವನ್ನು ತೆಗೆದುಹಾಕಲು ಮಸೂದೆ

ವಾಷಿಂಗ್ಟನ್: ಪಾಕಿಸ್ಥಾನವನ್ನು ಪ್ರಮುಖ ನ್ಯಾಟೋ ಅಲ್ಲದ ಮಿತ್ರ ಸ್ಥಾನಮಾನದಿಂದ ತೆಗೆದುಹಾಕಲು  ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಸೂದೆಯನ್ನು ಮಂಡಿಸಲಾಗಿದೆ. ಮಸೂದೆ ಅನುಮೋದನೆಯಾದರೆ  ಪಾಕಿಸ್ತಾನವು ಅಮೆರಿಕಾದ ಪ್ರಮುಖ ನ್ಯಾಟೋ ಅಲ್ಲದ ಮಿತ್ರ ಸ್ಥಾನಮಾನವನ್ನು ಕಳೆದುಕೊಳ್ಳಲಿದೆ.

ಅರಿಜೋನಾದ ಐದನೇ ಕಾಂಗ್ರೆಷನಲ್ ಜಿಲ್ಲೆಯನ್ನು ಪ್ರತಿನಿಧಿಸುವ ಕಾಂಗ್ರೆಸ್ಸಿಗ ಆಂಡಿ ಬಿಗ್ಸ್ ಅವರು ಮಸೂದೆಯನ್ನು ಪರಿಚಯಿಸಿದ್ದಾರೆ. ಈ ಮಸೂದೆಗೆ  ಕೆಲವು ಷರತ್ತುಗಳೊಂದಿಗೆ ಯುಎಸ್ ಅಧ್ಯಕ್ಷರ ವಾರ್ಷಿಕ ಪ್ರಮಾಣೀಕರಣದ ಅಗತ್ಯವಿದೆ.

ಯುಎಸ್ ಅಧ್ಯಕ್ಷರು ಕಾನೂನಾಗಿ ಸಹಿ ಹಾಕುವ ಮೊದಲು ಅದನ್ನು ಹೌಸ್ ಮತ್ತು ಸೆನೆಟ್ ಅಂಗೀಕರಿಸಬೇಕಾಗಿದೆ.

ಅಗತ್ಯ ಕ್ರಮಗಳಿಗಾಗಿ ಮಸೂದೆಯನ್ನು ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಕಳುಹಿಸಲಾಗಿದೆ.

ನ್ಯಾಟೋ ಅಲ್ಲದ ಪ್ರಮುಖ ಮಿತ್ರ ರಾಷ್ಟ್ರವಾಗಿ, ಪಾಕಿಸ್ತಾನವು ಹೆಚ್ಚುವರಿ ಯುಎಸ ರಕ್ಷಣಾ ಸರಬರಾಜುಗಳಿಗೆ ಪ್ರವೇಶ ಮತ್ತು ಸಹಕಾರಿ ಸಂಶೋಧನೆ, ಅಭಿವೃದ್ಧಿ, ಪರೀಕ್ಷೆ ಅಥವಾ ಮೌಲ್ಯಮಾಪನ ಉದ್ದೇಶಗಳಿಗಾಗಿ ಸಾಮಗ್ರಿಗಳು, ಸರಬರಾಜುಗಳು ಅಥವಾ ಸಲಕರಣೆಗಳ ಸಾಲಗಳಿಗೆ ಅರ್ಹತೆಯಂತಹ ಹಲವಾರು ಸವಲತ್ತುಗಳನ್ನು ಹೊಂದಿದೆ.

ಒಂದು ವೇಳೆ ಮಸೂದೆ ಜಾರಿಯಾದರೆ ಈ ಸವಲತ್ತುಗಳನ್ನು ಅದು ಕಳೆದುಕೊಳ್ಳಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top