News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತ್ರಿಪುರಾದಲ್ಲಿ ಫೆ.16ಕ್ಕೆ, ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಫೆ.27ಕ್ಕೆ ಚುನಾವಣೆ

ನವದೆಹಲಿ: ಚುನಾವಣಾ ಆಯೋಗ  ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಇಂದು ಪ್ರಕಟಿಸಿದೆ.

ತ್ರಿಪುರಾದಲ್ಲಿ ಫೆಬ್ರವರಿ 16 ರಂದು ಮತದಾನವಾದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗೆ ಫೆಬ್ರವರಿ 27 ರಂದು ಮತದಾನ ನಡೆಯಲಿದೆ.

ಎಲ್ಲಾ ಮೂರು ಈಶಾನ್ಯ ರಾಜ್ಯಗಳ ಫಲಿತಾಂಶವನ್ನು ಮಾರ್ಚ್ 2 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಮೂರು ರಾಜ್ಯಗಳ ವಿಧಾನಸಭೆಗಳು ತಲಾ 60 ಸದಸ್ಯರ ಬಲವನ್ನು ಹೊಂದಿದೆ.

ನಾಗಾಲ್ಯಾಂಡ್ ವಿಧಾನಸಭೆಯ ಅವಧಿ ಮಾರ್ಚ್ 12 ರಂದು ಕೊನೆಗೊಂಡರೆ, ಮೇಘಾಲಯ ವಿಧಾನಸಭೆಯ ಅವಧಿ ಮಾರ್ಚ್ 15 ರಂದು ಮತ್ತು ತ್ರಿಪುರಾ ವಿಧಾನಸಭೆ ಮಾರ್ಚ್ 22 ರಂದು ಮುಕ್ತಾಯಗೊಳ್ಳಲಿದೆ.

ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಒಂಬತ್ತು ರಾಜ್ಯಗಳಲ್ಲಿ ಮೂರು ಈಶಾನ್ಯ ರಾಜ್ಯಗಳು ಮೊದಲನೆಯವು ಆಗಲಿವೆ.

ತ್ರಿಪುರಾದಲ್ಲಿ ಬಿಜೆಪಿ ಸರ್ಕಾರವಿದ್ದರೆ, ನಾಗಾಲ್ಯಾಂಡ್‌ನಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಅಧಿಕಾರದಲ್ಲಿದೆ.

ಈಶಾನ್ಯದ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದ ಏಕೈಕ ಪಕ್ಷವಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮೇಘಾಲಯದಲ್ಲಿ ಸರ್ಕಾರವನ್ನು ಹೊಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top