ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ ಈ ಬಾರಿ ತುಸು ವಿಭಿನ್ನವಾಗಿ ಮೂಡಿ ಬರಲಿದೆ.
ಈ ಕಾರ್ಯಕ್ರಮಕ್ಕಾಗಿ ಧ್ವನಿ ರೆಕಾರ್ಡ್ ಮಾಡುವಂತೆ ಮೋದಿಯವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿಸಲ ಜನರು ಕಳುಹಿಸಿ ಪ್ರಶ್ನೆಗಳನ್ನು ಓದಿ ಮೋದಿ ಉತ್ತರಿಸುತ್ತಿದ್ದರು, ಆದರೆ ಈ ಬಾರಿ ಜನರು ತಮ್ಮ ಪ್ರಶ್ನೆಗಳು ರೆಕಾರ್ಡ್ ಮಾಡಿ ಕಳುಹಿಸಲಿದ್ದು, ಅದನ್ನು ಕಾರ್ಯಕ್ರಮದ ವೇಳೆ ಪ್ರಸಾರ ಮಾಡಲಾಗುತ್ತಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ, ವಾಯ್ಸ್ ರೆಕಾರ್ಡ್ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಈಗಾಗಲೇ ಕೆಲವೊಂದು ವಾಯ್ಸ್ ರೆಕಾರ್ಡಿಂಗ್ ಬಂದಿತ್ತು, ಅದು ಅತ್ಯಂತ ವಿಭಿನ್ನವಾಗಿದೆ ಎಂದಿದ್ದಾರೆ.
ಈ ತಿಂಗಳ ‘ಮನ್ ಕೀ ಬಾತ್’ ಸೆ.20ರಂದು ಪ್ರಸಾರಗೊಳ್ಳಲಿದೆ. ಮೊಬೈಲ್ ಮೂಲಕ ಟೋಲ್ ಫ್ರೀ ನಂಬರ್ 1800 3000 7800ಗೆ ಕರೆ ಮಾಡಿ ಧ್ವನಿ ಸಂದೇಶವನ್ನು ದಾಖಲಿಸಬಹುದು. ಸೆ.16ರ ವರೆಗೆ ಫೋನ್ ಲೈನ್ಗಳು ತೆರೆದಿರುತ್ತವೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.