News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

4,276 ಕೋಟಿ ರೂ ಮೊತ್ತದ 3 ರಕ್ಷಣಾ ಖರೀದಿ ಪ್ರಸ್ತಾವನೆಗಳಿಗೆ ಅನುಮೋದನೆ

ನವದೆಹಲಿ: ಚೀನಾದೊಂದಿಗೆ ಗಡಿ ಉದ್ವಿಗ್ನತೆ ಉಲ್ಭಣಗೊಂಡ ಬಳಿಕ ಭಾರತವು ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ(ಡಿಎಸಿ) ಮಂಗಳವಾರ 4,276 ಕೋಟಿ ರೂಪಾಯಿ ಮೊತ್ತದ ಮೂರು ರಕ್ಷಣಾ ಖರೀದಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ.

ಇವುಗಳಲ್ಲಿ ಹೆಲಿಕಾಪ್ಟರ್ ಲಾಂಚ್ಡ್ ನಾಗ್ (HELINA) ಟ್ಯಾಂಕ್‌ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳು (ATGM), ಅತಿ ಕಡಿಮೆ ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಗಳು (VSHORAD) ಮತ್ತು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಲಾಂಚರ್ ಮತ್ತು ನೌಕಾ ಹಡಗುಗಳಿಗೆ ಅಗ್ನಿ ನಿಯಂತ್ರಣ ವ್ಯವಸ್ಥೆ (FCS) ಸೇರಿವೆ. ಇವೆಲ್ಲವೂ ಸ್ಥಳೀಯವಾಗಿ ವಿನ್ಯಾಸಗೊಂಡಿವೆ ಮತ್ತು ಅಭಿವೃದ್ಧಿಗೊಂಡಿವೆ.

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಅಭಿವೃದ್ಧಿಪಡಿಸುತ್ತಿರುವ HELINA ಮತ್ತು ಧ್ರುವಸ್ತ್ರವು ಮೂರನೇ ತಲೆಮಾರಿನದ್ದಾಗಿದೆ,ಇದನ್ನು ಸ್ಥಳೀಯ ಎಎಲ್‌ಹೆಚ್ ಮತ್ತು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಾಗಿ ವಿನ್ಯಾಸಪಡಿಸಲಾಗಿದೆ. ಹೆಲಿನಾ ಆರ್ಮಿ ವೇರಿಯೆಂಟ್ ಮತ್ತು ಧ್ರುವಸ್ತ್ರ ಏರ್ ಫೋರ್ಸ್ ವೇರಿಯೆಂಟ್‌ ಆಗಿದೆ.

ಡಿಆರ್‌ಡಿಒ ವಿನ್ಯಾಸ ಮತ್ತು ಅಭಿವೃದ್ಧಿಯ ಅಡಿಯಲ್ಲಿ VSHORAD ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಕೂಡ ಮಂಡಳಿ ಅನುಮೋದನೆಯನ್ನು ನೀಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top