News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 2nd February 2023


×
Home About Us Advertise With s Contact Us

ತಪಸ್ಸು, ಪೂಜೆಯಂತಹ ಪದಗಳು ರಾಹುಲ್‌ ಗಾಂಧಿಗೆ ಸರಿಹೊಂದುವುದಿಲ್ಲ: ಬಿಜೆಪಿ

ನವದೆಹಲಿ: ತಪಸ್ಸು ಮತ್ತು ಪೂಜೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು, ತಪಸ್ಸು, ಪೂಜೆಯಂತಹ ಮಹಾನ್ ಪದಗಳು ರಾಹುಲ್ ಗಾಂಧಿ ಅವರಿಗೆ ಸರಿಹೊಂದುವುದಿಲ್ಲ ಎಂದು ಹೇಳಿದ್ದಾರೆ.

ಭಾರತದ ಸಂಸ್ಕೃತಿ, ಭಾರತದ ಮೌಲ್ಯಗಳು ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ದಶಕಗಳಿಂದ ವಿರೋಧಿಸಿದವರು ಇಂದು ಭಕ್ತರಾಗಿ ಮುಂದೆ ಬರುತ್ತಿದ್ದಾರೆ, ಆದರೆ ಭಾರತದ ಜನರಿಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿಜವಾದ ಮುಖ ತಿಳಿದಿದೆ ಎಂದು ಚುಗ್ ಹೇಳಿದ್ದಾರೆ.

ದೇಶದಲ್ಲಿ ತಪಸ್ಸು ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಏನೂ ಸಿಗುವುದಿಲ್ಲ. ದಿನವಿಡೀ ಪ್ರಧಾನಿ ಮೋದಿಯವರನ್ನು ಪೂಜಿಸುವ ಜನರು ಮಾತ್ರ ತಮಗೆ ಬೇಕಾದುದನ್ನು ಪಡೆಯುತ್ತಾರೆ. ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ರಸ್ತೆಗಳು, ವಿದ್ಯುತ್, ಎಲ್ಲವನ್ನೂ ಅವರಿಗೆ ಮಾತ್ರ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು  ಹೇಳಿದ್ದರು.

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಚುಗ್, “ಅಹಂಕಾರ, ದೌರ್ಜನ್ಯ, ಪ್ರಜಾಪ್ರಭುತ್ವದ ಕೊಲೆ, ತುರ್ತು ಪರಿಸ್ಥಿತಿ, ಸ್ವಜನಪಕ್ಷಪಾತ, ವಂಚನೆ, ಭ್ರಷ್ಟಾಚಾರ ಮತ್ತು ಲೂಟಿಯಿಂದ ತುಂಬಿರುವ ಇತಿಹಾಸ ಹೊಂದಿರುವವರು ತಪಸ್ಸು ಮತ್ತು ಪೂಜೆಯಂತಹ ಶ್ರೇಷ್ಠ ಮತ್ತು ಪವಿತ್ರ ಪದಗಳನ್ನು ಬಳಸಬಾರದು” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top