ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್ ಅವರಿಗೆ ’ಭಾರತ ರತ್ನ’ ಪ್ರಶಸ್ತಿಯನ್ನು ನೀಡುವಂತೆ ಶಿವಸೇನೆ ಒತ್ತಾಯಿಸಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ‘ಹಿಂದೂ ರಾಷ್ಟ್ರದ ಪ್ರತಿಪಾದಕರಾಗಿದ್ದ ವೀರ ಸಾರ್ವಕರ್ ಒಬ್ಬ ಧೀಮಂತ ಹೋರಾಟಗಾರ. ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸಿ’ ಎಂದಿದ್ದಾರೆ.
‘ಬ್ರಿಟಿಷ್ ನ್ಯಾಯಾಲಯ ಅವರಿಗೆ ಜೀವಾವಧಿ ಶೀಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳುಹಿಸಿತ್ತು. ಅತಿ ಕೆಟ್ಟದಾಗಿ ಅವರನ್ನು ನಡೆಸಿಕೊಂಡಿತು. ಆದರೂ ಅವರು ಸ್ಥಿರವಾಗಿ, ದೇಶಭಕ್ತರಾಗಿ ಉಳಿದರು’ ಎಂದಿದ್ದಾರೆ.
‘ಹಿಂದಿನ ಸರ್ಕಾರಗಳು ಸಾರ್ವಕರ್ ಅವರ ಕೊಡುಗೆಯನ್ನು ನಿರ್ಲಕ್ಷ್ಯಿಸಿವೆ. ಅವರು ಹಿಂದೂ ದೇಶದ ಬೆಂಬಲಿಗ, ಹೀಗಾಗಿ ಹಿಂದಿನ ಸರ್ಕಾರ ಅವರ ವಿರುದ್ಧ ದ್ವೇಷ ಸಾಧಿಸಲು ಮುಂದಾಯಿತು. ನಿಮ್ಮ ಸರ್ಕಾರ ಅವರಿಗೆ ಭಾರತ ರತ್ನ ನೀಡುತ್ತದೆ ಎಂಬ ಸಂಪೂರ್ಣ ನಂಬಿಕೆ ಇದೆ’ ಎಂದು ರಾವತ್ ಪತ್ರದಲ್ಲಿ ಮೋದಿಗೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.