News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

PLI ಯೋಜನೆಯಡಿ ಆಹಾರ ಸಂಸ್ಕರಣಾ ಉದ್ಯಮದಿಂದ 4,900 ಕೋಟಿ ರೂ ಹೂಡಿಕೆ

ನವದೆಹಲಿ: ಆಹಾರ ಸಂಸ್ಕರಣಾ ಉದ್ಯಮವು ಉತ್ಪಾದನಾ ಸಂಬಂಧಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಡಿ ಇದುವರೆಗೆ 4,900 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಆಹಾರ ಸಂಸ್ಕರಣಾ ಉದ್ಯಮಕ್ಕಾಗಿ PLI ಯೋಜನೆಯನ್ನು ಮಾರ್ಚ್ 2021 ರಲ್ಲಿ 10,900 ಕೋಟಿ ರೂಪಾಯಿಗಳೊಂದಿಗೆ ಅನುಮೋದಿಸಿದೆ. ಈ ಯೋಜನೆಯು 2026-27 ರವರೆಗೆ ಏಳು ವರ್ಷಗಳ ಅವಧಿಗೆ ಜಾರಿಗೆ ಬರಲಿದೆ.

”ಆಹಾರ ಸಂಸ್ಕರಣಾ ಉದ್ಯಮಕ್ಕಾಗಿ ಪಿಎಲ್‌ಐ ಯೋಜನೆಯಡಿ, ವಿವಿಧ ವರ್ಗಗಳ ಅಡಿಯಲ್ಲಿ ಒಟ್ಟು 182 ಅರ್ಜಿಗಳನ್ನು ಅನುಮೋದಿಸಲಾಗಿದೆ” ಎಂದು ಆಹಾರ ಸಚಿವಾಲಯ  ಹೇಳಿಕೆಯಲ್ಲಿ ತಿಳಿಸಿದೆ.

ಇದು ಸಿರಿಧಾನ್ಯ ಆಧಾರಿತ ಉತ್ಪನ್ನಗಳಿಗಾಗಿ PLI ಯೋಜನೆಯಡಿಯಲ್ಲಿ 30 ಅರ್ಜಿಗಳನ್ನು (8 ದೊಡ್ಡ ಘಟಕಗಳು ಮತ್ತು 22 SME ಗಳು) ಒಳಗೊಂಡಿದೆ ಎಂದು ಅದು ಹೇಳಿದೆ.

”ಪಿಎಲ್‌ಐ ಯೋಜನೆ ಫಲಾನುಭವಿಗಳು ವರದಿ ಮಾಡಿರುವ ಅಂಕಿ ಅಂಶಗಳ ಪ್ರಕಾರ ಈ ಯೋಜನೆಯಡಿ ಸುಮಾರು 4900 ಕೋಟಿ ರೂ.ಗಳ ಹೂಡಿಕೆ ಮಾಡಲಾಗಿದೆ” ಎಂದು ಸಚಿವಾಲಯ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 800 ಕೋಟಿ ರೂ.ಗಳ ಪ್ರೋತ್ಸಾಹ ಧನ ವಿತರಿಸುವ ಸಾಧ್ಯತೆ ಇದೆ. 107.3 ಕೋಟಿ ರೂ.ಗಳ ಮಾರಾಟ ಆಧಾರಿತ ಪ್ರೋತ್ಸಾಹಧನವನ್ನು ಇಲ್ಲಿಯವರೆಗೆ ವಿತರಿಸಲಾಗಿದೆ ಎಂದು ಅದು ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top