ಪಾಟ್ನಾ: ಎಲ್ಲರೂ ತಲುಪಲಾಗದ, ಸಾಧಿಸಲು ಯಾವ ಗುರಿಯೂ ಇರದ ವಯಸ್ಸು ಅವರದ್ದು, ಆದರೆ ತನ್ನ ಕನಸನ್ನು ನನಸು ಮಾಡಲೇ ಬೇಕು ಎಂದು ಪಣತೊಟ್ಟಿರುವ 95 ವರ್ಷದ ರಾಜ್ ಕುಮಾರ್ ವೈಶ್ಯಾ ಅವರು ಇಳಿವಯಸ್ಸಿನಲ್ಲೂ ಸ್ನಾತಕೋತರ ಪದವಿ ಪಡೆದುಕೊಳ್ಳಲು ಮುಂದಾಗಿದ್ದಾರೆ.
ನಿವೃತ್ತ ಮಗ ಮತ್ತು ಸೊಸೆಯ ಸಹಾಯದಿಂದ ಅಧ್ಯಯನ ನಡೆಸುತ್ತಿರುವ, ಈಗ ನಳಂದಾ ವಿಶ್ವವಿದ್ಯಾನಿಯಲಕ್ಕೆ ಸ್ನಾತಕೋತರ ಪದವಿಗೆ ಸೇರ್ಪಡೆಗೊಂಡಿದ್ದಾರೆ,
ಅಲ್ಲಿ ಅವರು ಅರ್ಥಶಾಸ್ತ್ರ ಅಧ್ಯಯನ ಮಾಡಲಿದ್ದಾರೆ.
ದೇಶ ಯಾಕೆ ಬಡತನ, ಅನಕ್ಷರತೆಮ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ನಾನು ಅರ್ಥಶಾಸ್ತ್ರ ಕಲಿಯಲು ಮುಂದಾಗಿದ್ದೇನೆ. ಪದವಿ ಪಡೆಯುವ ಆಸೆ ನನ್ನದಲ್ಲ, ಜ್ಞಾನ ಪಡೆಯಬೇಕೆಂಬುದು ನನ್ನ ಗುರಿ ಎಂದು ಯುವಕರನ್ನು ನಾಚಿಸುವ ಉತ್ಸಾಹದ ಮಾತುಗಳನ್ನಾಡುತ್ತಾರೆ.
ಇವರ 70 ವರ್ಷದ ಮಗ ಎನ್ಐಟಿ ಪಾಟ್ನಾದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಂದೆ ಈ ಇಳಿ ವಯಸ್ಸಿನಲ್ಲಿ ಕಲಿಯಬೇಕೆಂದಾಗ ಮೂಗು ಮುರಿಯದೆ ತಂದೆಯ ಕನಸಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.