News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

700 ಮಿಲಿಯನ್‌ ಕಲ್ಲಿದ್ದಲು ಉತ್ಪಾದನಾ ಗುರಿ ತಲುಪಲಿದೆ ಕೋಲ್‌ ಇಂಡಿಯಾ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಪಿಎಸ್‌ಯು ಕೋಲ್‌ ಇಂಡಿಯಾ 700 ಮಿಲಿಯನ್ ಟನ್ ಉತ್ಪಾದನಾ ಗುರಿಯನ್ನು ಸಾಧಿಸಲಿದೆ ಎಂದು ಕೋಲ್ ಇಂಡಿಯಾ ಅಧ್ಯಕ್ಷ ಪ್ರಮೋದ್ ಅಗರವಾಲ್  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋಲ್ ಇಂಡಿಯಾ (ಸಿಐಎಲ್) ದೇಶೀಯ ಕಲ್ಲಿದ್ದಲು ಉತ್ಪಾದನೆಯ ಶೇಕಡಾ 80 ಕ್ಕಿಂತ ಹೆಚ್ಚು ಪಾಲು ಹೊಂದಿದೆ.

“ನನಗೆ ವಿಶ್ವಾಸವಿದೆ. ಕೋಲ್ ಇಂಡಿಯಾ ಈ ಹಣಕಾಸು ವರ್ಷದಲ್ಲಿ 700 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನಾ ಗುರಿಯನ್ನು ಸಾಧಿಸುತ್ತದೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವರ್ಚುವಲ್‌ ಆಗಿ CIL-ಆರ್ಮ್ ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ (MCL) ತಂಡವನ್ನು ಉದ್ದೇಶಿಸಿ ಮಾತನಾಡಿದ ಅಗರವಾಲ್, ಕಲ್ಲಿದ್ದಲಿನ ಉದ್ದೇಶಿತ ಉತ್ಪಾದನೆಗಿಂತ 15.9 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದ್ದಕ್ಕಾಗಿ ಕಂಪನಿಯ ಅಧಿಕಾರಿಗಳನ್ನು ಅಭಿನಂದಿಸಿದರು.

ಮುಂಬರುವ ದಿನಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಿರುವ ಅಗರವಾಲ್, ಕೋಲ್ ಇಂಡಿಯಾ ಮತ್ತು ಎಂಸಿಎಲ್ ವಿದ್ಯುತ್ ವಲಯಕ್ಕೆ ಪ್ರತಿದಿನ ಸುಮಾರು 435,000 ಟನ್ ಕಲ್ಲಿದ್ದಲನ್ನು ಯಶಸ್ವಿಯಾಗಿ ಪೂರೈಸುತ್ತಿದೆ, ಇದು ಮುಂದಿನ ದಿನಗಳಲ್ಲಿ ತಮ್ಮ ಕೊಡುಗೆಯನ್ನು ಹೆಚ್ಚಾಗಬೇಕಿದೆ ಎಂದಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್‌ನ ಉತ್ಪಾದನೆಯು 400 ಮಿಲಿಯನ್ ಟನ್‌ಗಳನ್ನು ದಾಟಿದೆ ಎಂದು ಕಳೆದ ತಿಂಗಳು ವರದಿಯಾಗಿದೆ, ಇದು ಕಂಪನಿಯ ಇತಿಹಾಸದಲ್ಲಿ ಅತ್ಯಂತ ವೇಗದ ಗತಿಯಾಗಿದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top