News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಒಂದು ಶ್ರೇಣಿ ಒಂದು ಪಿಂಚಣಿʼ ಪರಿಷ್ಕರಣೆ: 25 ಲಕ್ಷ ಯೋಧರಿಗೆ ಪ್ರಯೋಜನ

ನವದೆಹಲಿ: ʼಒಂದು ಶ್ರೇಣಿ ಒಂದು ಪಿಂಚಣಿʼ ಅಡಿಯಲ್ಲಿ ರಕ್ಷಣಾ ಪಡೆಗಳ ಸಿಬ್ಬಂದಿ ಮತ್ತು ಕುಟುಂಬ ಪಿಂಚಣಿದಾರರ ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

ಪರಿಷ್ಕರಣೆಯ ನಂತರ ರಕ್ಷಣಾ ಪಡೆಗಳ ಸಿಬ್ಬಂದಿ ಮತ್ತು ಕುಟುಂಬ ಪಿಂಚಣಿದಾರ ಫಲಾನುಭವಿಗಳ ಸಂಖ್ಯೆ ಪ್ರಸ್ತುತ ಇರುವ 20.60 ಲಕ್ಷ ಸಿಬ್ಬಂದಿಯಿಂದ 25.13 ಲಕ್ಷಕ್ಕೆ ಏರಲಿದೆ ಎಂದು ಕೇಂದ್ರ ಸಚಿವ ಅನುರಾಗ್  ಠಾಕೂರ್ ಹೇಳಿದ್ದಾರೆ.

 ʼಒಂದು ಶ್ರೇಣಿ ಒಂದು ಪಿಂಚಣಿʼಗೆ ವಾರ್ಷಿಕ  8,450 ಕೋಟಿ ರೂಪಾಯಿ ವ್ಯಯ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

2019 ರ ಜುಲೈ 1 ರಿಂದ ಪರಿಷ್ಕರಣೆ ಜಾರಿಗೆ ಬರಲಿದೆ. ನಾಲ್ಕು ಅರ್ಧವಾರ್ಷಿಕ ಕಂತುಗಳಲ್ಲಿ ಬಾಕಿ ಪಾವತಿಸಲಾಗುವುದು ಎಂದು ಎಂದು ಠಾಕೂರ್ ಹೇಳಿದ್ದಾರೆ.

ಆದರೆ, ವಿಶೇಷ ಮತ್ತು ಉದಾರೀಕೃತ ಕುಟುಂಬ ಪಿಂಚಣಿ ಮತ್ತು ಶೌರ್ಯ ಪ್ರಶಸ್ತಿ ವಿಜೇತರು ಸೇರಿದಂತೆ ಎಲ್ಲಾ ಕುಟುಂಬ ಪಿಂಚಣಿದಾರರಿಗೆ ಒಂದೇ ಕಂತಿನಲ್ಲಿ ಬಾಕಿ ಪಾವತಿಸಲಾಗುವುದು ಎಂದಿದ್ದಾರೆ.

ಹಿಂದಿನ ಪಿಂಚಣಿದಾರರ ಪಿಂಚಣಿಯನ್ನು 2018 ರ ಕ್ಯಾಲೆಂಡರ್ ವರ್ಷದ ರಕ್ಷಣಾ ಪಡೆಗಳ ನಿವೃತ್ತಿ ವೇತನದಾರರ ಸರಾಸರಿ ಮತ್ತು ಅದೇ ಶ್ರೇಣಿಯ ಸೇವೆಯ ಸರಾಸರಿ ಆಧಾರದ ಮೇಲೆ ಮರುನಿಗದಿಗೊಳಿಸಲಾಗುತ್ತದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top