ನವದೆಹಲಿ: ಪುಣೆ ಮೂಲದ ಉದ್ಯಮಿ ಸೈರಸ್ ಪೂನಾವಾಲಾ ಅವರು ಬರೋಬ್ಬರಿ 750ಕೋಟಿ ನೀಡಿ ದಕ್ಷಿಣ ಮುಂಬಯಿಯ ಬ್ರೀಚ್ ಕ್ಯಾಂಡಿಯಲ್ಲಿರುವ ಯುಎಸ್ ಗವರ್ನ್ಮೆಂಟ್ ಒಡೆತನದ ಅರಮನೆ ಆಸ್ತಿ ಲಿಂಕನ್ ಹೌಸನ್ನು ಖರೀದಿಸಿದ್ದಾರೆ.
ಎರಡು ಎಕರೆ ಪ್ರದೇಸದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಈ ಅರಮನೆ 1957ರಿಂದ ಅಮೆರಿಕ ರಾಯಭಾರಿಗಳ ನಿವಾಸವಾಗಿದೆ. ಹೀಗಾಗಿ ಇದರ ಮೂಲ ಹೆಸರು ವಾಂಕ್ನೇರ್ ಪ್ಯಾಲೇಸ್ ಎಂದಾದರೂ ಬಳಿಕ ಇದನ್ನು ಲಿಂಕನ್ ಪ್ಯಾಲೇಸ್ ಎಂದೇ ಕರೆಯಲಾಗಿತ್ತು.
2011ರಲ್ಲಿ ಯುಎಸ್ ಸರ್ಕಾರ ಇದನ್ನು ಮಾರಾಟಕ್ಕಿಟ್ಟು, ಇದರ ಬೆಲೆ 830 ಕೋಟಿ ರೂಪಾಯಿ ಎಂದು ಘೋಷಿಸಿತ್ತು, ಆದರೆ ಇಷ್ಟು ಬೆಲೆಗೆ ಖರೀದಿಸಲು ಯಾರೊಬ್ಬರೂ ಮುಂದೆ ಬಂದಿಲ್ಲ. ಇದೀಗ 750 ಕೋಟಿಗೆ ಪೂನಾವಾಲ ಇದನ್ನು ಖರೀದಿಸಿದ್ದಾರೆ.
ಇತ್ತೀಚಿಗಷ್ಟೇ ಮತ್ತೊಬ್ಬ ಶ್ರೀಮಂತ ಉದ್ಯಮಿ ಕುಮಾರ ಮಂಗಳಮ್ ಬಿರ್ಲಾ ಅವರು 425ಕೋಟಿ ರೂಪಾಯಿ ತೆತ್ತು ಮನೆಯೊಂದನ್ನು ಖರೀಸಿದ್ದರು, ಇದೀಗ ಅದರ ಬೆನ್ನಲ್ಲೇ ಪೂನಾವಾಲಾ ಅದಕ್ಕಿಂತಲೂ ಮಿಗಿಲಾದ ಅರಮನೆಯನ್ನು ಖರೀದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.