ನವದೆಹಲಿ: ಸೆ.27ರಂದು ಅಮೆರಿಕಾಗೆ ಪ್ರಯಾಣ ಬೆಳೆಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಫೇಸ್ಬುಕ್ ಕಛೇರಿಗೆ ತೆರಳಿ ಸಿಇಓ ಮಾರ್ಕ್ ಝುಕರ್ಬರ್ಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಫೇಸ್ಬುಕ್ ಸಿಇಓನನ್ನು ಅವರು ಭೇಟಿಯಾಗುವ ವಿಚಾರ ತಿಳಿಯುತ್ತಲೇ ಹಲವಾರು ಮಂದಿ ಫೇಸ್ಬುಕ್ನಲ್ಲಿನ ‘ಕ್ಯಾಂಡಿ ಕ್ರಶ್’ ನೋಟಿಫಿಕೇಶನ್ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಅವರಿಗೆ ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ.
ಫೇಸ್ಬುಕ್ ಸಿಇಓನೊಂದಿಗೆ ಯಾವ ಯಾವ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಎಂದು ಸಲಹೆ ನೀಡುವಂತೆ ಮೋದಿ ಜನರಿಗೆ ಕೇಳಿಕೊಂಡಿದ್ದಾರೆ. ಇದಕ್ಕೆ ಬಹುತೇಕ ಮಂದಿ ದಯವಿಟ್ಟು ಈ ಕ್ಯಾಂಡಿ ಕ್ರಶ್ನ್ನು ಫೇಸ್ಬುಕ್ನಿಂದ ನಿಷೇಧಿಸುವಂತೆ ಮನವಿ ಮಾಡಿ ಎಂದು ಮೋದಿಗೆ ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.