News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೈರಲ್‌ ಆಗುತ್ತಿದೆ ಭಾರತೀಯ ಯೋಧರು ಚೀನಿ ಸೈನಿಕರನ್ನು ಥಳಿಸುತ್ತಿರುವ ವಿಡಿಯೋ

ನವದೆಹಲಿ: ಮಂಗಳವಾರ ಸಂಜೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ಸೇನಾ ಸಿಬ್ಬಂದಿ ಚೀನಾದ ಪಿಎಲ್‌ಎ ಸೈನಿಕರನ್ನು ಥಳಿಸುತ್ತಿರುವ ವಿಡಿಯೋಗಳು ವೈರಲ್‌ ಆಗುತ್ತಿವೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಮತ್ತು ಚೀನಾದ ಸಶಸ್ತ್ರ ಪಡೆಗಳ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯ ಬಳಿಕ ನೆಟಿಜನ್‌ಗಳು ವೀಡಿಯೊವನ್ನು ಮರು ಪೋಸ್ಟ್ ಮಾಡುತ್ತಿದ್ದಾರೆ.

ಚೀನಾದ ಪಿಎಲ್‌ಎ  ಗಡಿಯಲ್ಲಿ ಯಥಾಸ್ಥಿತಿ ಬದಲಾಯಿಸಲು ಪ್ರಯತ್ನಿಸಿದ ನಂತರ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಗಡಿ ಪ್ರದೇಶದಲ್ಲಿ ಡಿಸೆಂಬರ್ 9 ರಂದು ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆಗಳು ಸಂಭವಿಸಿತ್ತು.

ಭಾರತೀಯ ಸೇನೆಯ ಸಿಬ್ಬಂದಿ ಚೀನಾದ ಪಿಎಲ್‌ಎ ಪಡೆಗಳನ್ನು ಥಳಿಸುತ್ತಿರುವುದನ್ನು ವೀಡಿಯೊ ಉಭಯ ಸೈನಿಕರ ನಡುವೆ ಗಲಾಟೆ ನಡೆಯುತ್ತಿರುವುದನ್ನು ತೋರಿಸಿದೆ. ಭಾರತೀಯ ಯೋಧರು ಚೀನಿಯರನ್ನು ಇನ್ನಿಲ್ಲದಂತೆ ಥಳಿಸುತ್ತಿದ್ದಾರೆ. ಆದರೆ ಇದು ಡಿಸೆಂಬರ್‌ 9ರಂದು ನಡೆದ ಘಟನೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ.

ಹಲವಾರು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಕೆಲವರು ಇದು ಡಿಸೆಂಬರ್ 9 ರಂದು ಉಭಯ ದೇಶಗಳ ಸೇನೆಗಳ ನಡುವಿನ ಘರ್ಷಣೆ ಎಂದು ಹೇಳಿಕೊಂಡಿದ್ದಾರೆ. ಆದರೆ ದೃಢಪಟ್ಟಿಲ್ಲ. ಗಡಿಯ ಇನ್ನೊಂದು ಕಡೆ ಹಿಂದೆ ನಡೆದ ಘಟನೆ ಇದೆಂದು ಹೇಳಲಾಗುತ್ತಿದೆ.

ಅದೇನೆಯಿದ್ದರೂ ಭಾರತೀಯ ಯೋಧರು ಚೀನಿಯರನ್ನು ಥಳಿಸುತ್ತಿರುವ ರೀತಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top