News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ 2 ರಕ್ಷಣಾ ಕಾರಿಡಾರ್‌ಗಳಲ್ಲಿ ಹೂಡಿಕೆ ಮಾಡಲಿವೆ 150 ಕಂಪನಿಗಳು

ನವದೆಹಲಿ: ದೇಶದ ಎರಡು ರಕ್ಷಣಾ ಕಾರಿಡಾರ್‌ಗಳು ಸುಮಾರು 150 ಕಂಪನಿಗಳಿಂದ ಸುಮಾರು 24,000 ಕೋಟಿ ರೂಪಾಯಿಗಳ ಹೂಡಿಕೆ ಪ್ರಸ್ತಾವನೆಗಳನ್ನು ಸ್ವೀಕರಿಸಿವೆ.

ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸರ್ಕಾರವು ದೇಶದಲ್ಲಿ ಎರಡು ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳನ್ನು (ಡಿಐಸಿ) ಸ್ಥಾಪಿಸಿದೆ, ಒಂದು ಉತ್ತರ ಪ್ರದೇಶದಲ್ಲಿದೆ ಮತ್ತು ಇನ್ನೊಂದು ತಮಿಳುನಾಡಿನಲ್ಲಿದೆ .

ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ (UPDIC) ಅಭಿವೃದ್ಧಿಪಡಿಸಲು ಆರು ನೋಡ್‌ಗಳನ್ನು ಗುರುತಿಸಲಾಗಿದೆ. ಅದೆಂದರೆ ಆಗ್ರಾ, ಅಲಿಗಢ, ಚಿತ್ರಕೂಟ, ಝಾನ್ಸಿ, ಕಾನ್ಪುರ ಮತ್ತು ಲಕ್ನೋ.

ಅದೇ ರೀತಿ, ತಮಿಳುನಾಡು ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ (ಟಿಎನ್‌ಡಿಐಸಿ) ಅಭಿವೃದ್ಧಿಪಡಿಸಲು ಐದು ನೋಡ್‌ಗಳನ್ನು ಚೆನ್ನೈ, ಕೊಯಮತ್ತೂರು, ಹೊಸೂರು, ಸೇಲಂ ಮತ್ತು ತಿರುಚಿರಾಪಳ್ಳಿ ಗುರುತಿಸಲಾಗಿದೆ.

“ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಾಗಿ 12,139 ಕೋಟಿ ರೂಪಾಯಿಗಳ ಸಂಭಾವ್ಯ ಹೂಡಿಕೆಯ ಉದ್ಯಮಗಳ 105 ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಲಾಗಿದೆ” ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಈಗಾಗಲೇ 2,422 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

“ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿಗಾಗಿ ಒಟ್ಟು 1,608 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ” ಎಂದು ಸಚಿವರು ಹೇಳಿದರು.

“ಇದಲ್ಲದೆ, ತಮಿಳುನಾಡು ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ 53 ಕೈಗಾರಿಕೆಗಳಿಂದ 11,794 ಕೋಟಿ ರೂಪಾಯಿಗಳ ಸಂಭಾವ್ಯ ಹೂಡಿಕೆಗಾಗಿ ತಿಳುವಳಿಕೆ ಒಪ್ಪಂದ (ಎಂಒಯು)ಗೆ ಸಹಿ ಮಾಡಿದೆ. 3,847 ಕೋಟಿ ರೂಪಾಯಿ ಈಗಾಗಲೇ TNDIC ನಲ್ಲಿ ಹೂಡಿಕೆ ಮಾಡಲಾಗಿದೆ.

ತಮಿಳುನಾಡು ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ ಅಭಿವೃದ್ಧಿಗಾಗಿ ಒಟ್ಟು 910 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top