News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಸ್ಸಾಂ: 1,179 ಬ್ರೂ ಬಂಡುಕೋರರ ಶರಣಾಗತಿ

ನವದೆಹಲಿ: ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಎರಡು ಸಂಘಟನೆಗಳಿಗೆ ಸೇರಿದ ಒಟ್ಟು 1,179 ಬ್ರೂ ಬಂಡುಕೋರರು ಇಂದು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುನೈಟೆಡ್ ಡೆಮಾಕ್ರಟಿಕ್ ಲಿಬರೇಶನ್ ಫ್ರಂಟ್ ಆಫ್ ಬರಾಕ್ ವ್ಯಾಲಿ (UDLF-BV) ಮತ್ತು ಬ್ರೂ ರೆವಲ್ಯೂಷನರಿ ಆರ್ಮಿ ಆಫ್ ಯೂನಿಯನ್ (BRAU) ಗೆ ಸೇರಿದ ಬಂಡುಕೋರರು 18 AK ಸರಣಿ ರೈಫಲ್‌ಗಳು, 400 ಕ್ಕೂ ಹೆಚ್ಚು ಕಾರ್ಟ್ರಿಜ್‌ಗಳು, M16 ಸೇರಿದಂತೆ 350 ಬಂದೂಕುಗಳನ್ನು ಹಸ್ತಾಂತರಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ವಿಶೇಷ ಶಾಖೆ) ಹಿರೇನ್ ಚಂದ್ರ ನಾಥ್ ಹೇಳಿದ್ದಾರೆ.

ಅಸ್ಸಾಂ-ಮಿಜೋರಾಂ ಗಡಿಯಲ್ಲಿರುವ ಪ್ರದೇಶಗಳಲ್ಲಿ ಈ ಎರಡು ಸಂಘಟನೆಗಳು ಹೆಚ್ಚಾಗಿ ಸಕ್ರಿಯವಾಗಿದ್ದವು.

“ಈ ಎರಡು ಗುಂಪುಗಳೊಂದಿಗಿನ ಶಾಂತಿ ಪ್ರಕ್ರಿಯೆಯು 2017 ರಿಂದ ನಡೆಯುತ್ತಿದೆ. ಕೆಲವು ಭಿನ್ನಾಭಿಪ್ರಾಯಗಳಿವೆ ಆದರೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾವು ಅವರನ್ನು ಸಂಧಾನದ ಮೇಜಿಗೆ ಬರುವಂತೆ ಮನವರಿಕೆ ಮಾಡಿದ್ದೇವೆ” ಎಂದು ಚಂದ್ರನಾಥ್ ಹೇಳಿದ್ದಾರೆ. ಈಗಾಗಲೇ ಭದ್ರತಾ ಪಡೆ

ಗಳೊಂದಿಗೆ ಕದನ ವಿರಾಮದಲ್ಲಿದ್ದ ಬಂಡುಕೋರರು ಅಸ್ಸಾಂ ವಿಧಾನಸಭೆ ಸ್ಪೀಕರ್ ಬಿಸ್ವಜಿತ್ ಡೈಮರಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಪಿಜುಶ್ ಹಜಾರಿಕಾ ಅವರ ಮುಂದೆ ಔಪಚಾರಿಕವಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top