ಅಲಹಾಬಾದ್: ಪರ್ಶಿಯ ಮತ್ತು ಉರ್ದು ಭಾಷೆಯಲ್ಲಿ ಮುಸ್ಲಿಂ ಲೇಖಕರು ಬರೆದ ರಾಮನ ಕಥೆಗಳುಳ್ಳ ಪುಸ್ತಕಗಳನ್ನು ಅಲಹಾಬಾದ್ನಲ್ಲಿ ಸೆ.30 ರಿಂದ ಅಕ್ಟೋಬರ್ 4ರವರೆಗೆ ಪ್ರದರ್ಶನಕ್ಕೆ ಇಡಲಾಗುತ್ತದೆ.
ಸದುಲ್ಲಾಹ ಮಸಿಹಿ ಅವರು ಪರ್ಶಿಯನ್ ಭಾಷೆಯಲ್ಲಿ ಬರೆದ ಪ್ರಸಿದ್ಧ ಕೃತಿ ರಾಮಾಯಣ ಮಸಿಹಿ ಸೇರಿದಂತೆ 4 ಶತಮಾನ ಹಳೆಯ ಹತ್ತು ಹಲವಾರು ಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿದೆ.
‘ಅರೇಬಿಕ್, ಪರ್ಶಿಯನ್, ಉರ್ದು ಮುಂತಾದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡ ಕೃತಿ ರಾಮಾಯಣ. ಮುಸ್ಲಿಂರು ಹಿಂದೂ ತತ್ವಶಾಸ್ತ್ರ, ಪದ್ಧತಿ, ಸಂಸ್ಕೃತಿಗಳನ್ನು ಆಳವಾಗಿ ಅರ್ಥೈಸಿಕೊಂಡು ಇದನ್ನು ಅಭಿವೃದ್ಧಿಪಡಿಸಿದ್ದಾರೆ’ ಎಂದು ಪ್ರದರ್ಶನ ಆಯೋಜಕ ಅಮಿತ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ರಾಮಾಯಣ ಏಕ್ ಖಾಫಿಯಾ, ಶ್ರೀರಾಮ್ ನಾಟಕ್, ರಾಮ್ಲೀಲಾ ಮುಂತಾದ ಕೃತಿಗಳು ಪ್ರದರ್ಶನಗೊಳ್ಳಲಿದೆ. ಉರ್ದು ರಾಯಾಯಣದಲ್ಲಿ ಕೈಯಲ್ಲಿ ಬಿಡಸಲಾದ ರಾಮ, ಲಕ್ಷ್ಮಣ, ಸೀತೆದೇವಿಯ ಚಿತ್ರಗಳೂ ಇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.