ನವದೆಹಲಿ: ಭಾರತದ ಅಗ್ರಮಾನ್ಯ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರು ಕೊಲಂಬಿಯಾದ ಬೊಗೋಟಾದಲ್ಲಿ ನಡೆದ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 200 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದ್ದು ಮಹತ್ವದ ಸಾಧನೆ ಮಾಡಿದ್ದಾರೆ.
49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಚಾನು ಮಂಗಳವಾರ ರಾತ್ರಿ ಸ್ನ್ಯಾಚ್ನಲ್ಲಿ 87 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು ಮತ್ತು ‘ಕ್ಲೀನ್ ಅಂಡ್ ಜರ್ಕ್’ನಲ್ಲಿ 113 ಕೆಜಿ ಎತ್ತುವಲ್ಲಿ ಯಶಸ್ವಿಯಾದರು.
2017ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚಾನು ಅವರು ಇದೀಗ ವಿಶ್ವ ಚಾಂಪಿಯನ್ನಲ್ಲಿ ಎರಡನೇ ಬಾರಿಗೆ ಬೆಳ್ಳಿ ಜಯಿಸಿದ್ದಾರೆ.
ಈ ವಿಭಾಗದಲ್ಲಿ ಒಟ್ಟು 206 ಕೆಜಿ (93 ಕೆಜಿ + 113 ಕೆಜಿ) ಭಾರ ಎತ್ತಿದ ಚೀನಾದ ಜಿಯಾಂಗ್ ಹುಯಿಹುವಾ ಅವರು ಚೀನದ ಪದಕ ಜಯಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಚೀನಾದ ಹೌ ಝಿಹುವಾ 198 ಕೆಜಿ (89 ಕೆಜಿ + 109 ಕೆಜಿ) ಭಾರ ಎತ್ತುವ ಮೂಲಕ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ತರಬೇತಿ ಅವಧಿಯಲ್ಲಿ ಮಣಿಕಟ್ಟಿಗೆ ನೋವು ಮಾಡಿಕೊಂಡಿದ್ದರೂ ಚಾನು ಅವರು ಬೆಳ್ಳಿ ಗೆದ್ದು ಮಹತ್ವದ ಸಾಧನೆ ಮಾಡಿದ್ದಾರೆ. ಅಕ್ಟೋಬರ್ನಲ್ಲಿ ಗಾಯದ ಜೊತೆಗೆಯೇ ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದಿದ್ದರು.
Congratulations @mirabai_chanu
on winning Silver Medal in Weightlifting World Championship! With a total lift of 200kg (87kg snatch + 113kg clean & jerk, Mirabai has made India proud yet again! pic.twitter.com/uirJUSqI1y— Kiren Rijiju (@KirenRijiju) December 7, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.