News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚಾರಿಟಿ ಉದ್ದೇಶವು ಮತಾಂತರವಾಗಿರಬಾರದು: ಸುಪ್ರೀಂಕೋರ್ಟ್

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರದ ವಿಷಯವು ಬಹಳ ಗಂಭೀರ ವಿಷಯ ಎಂದು ಸೋಮವಾರ ಪುನರುಚ್ಚರಿಸಿದ ಸುಪ್ರೀಂಕೋರ್ಟ್, ಚಾರಿಟಿ ಸ್ವಾಗತಾರ್ಹ, ಆದರೆ ಚಾರಿಟಿ ಉದ್ದೇಶವು ಮತಾಂತರವಾಗಿರಬಾರದು ಎಂದು ಒತ್ತಿಹೇಳಿದೆ.

ನ್ಯಾಯಮೂರ್ತಿ ಎಂ.ಆರ್.ಶಾ ನೇತೃತ್ವದ ಪೀಠವು ಯಾರಿಗಾದರೂ ಸಹಾಯ ಬೇಕಾದರೆ ಆ ವ್ಯಕ್ತಿಗೆ ಸಹಾಯ ಮಾಡಬೇಕು. ಆದರೆ ಆಮಿಷಗಳು ಅಪಾಯಕಾರಿ ಎಂದು ಹೇಳಿದರು ಮತ್ತು ಜನರು ವಿವಿಧ ಕಾರಣಗಳಿಗಾಗಿ ಮತಾಂತರಗೊಳ್ಳುತ್ತಾರೆ ಎಂದಿದ್ದಾರೆ.

“ಕೆಲವು ಸಹಾಯವನ್ನು ನೀಡುವ ಮೂಲಕ,  ಚಾರಿಟಿ ಮೂಲಕ ಮತಾಂತರವಾಗಬಾರದು. ಪ್ರತಿ ದಾನ, ಒಳ್ಳೆಯ ಕೆಲಸವು ಸ್ವಾಗತಾರ್ಹ. ಆದರೆ ಅಗತ್ಯವಿರುವುದನ್ನು ನೀಡಿ ಮತಾಂತರ ಮಾಡುವುದು ನಮ್ಮ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ. ಭಾರತದಲ್ಲಿ ಬದುಕುವ ಪ್ರತಿಯೊಬ್ಬರೂ ಭಾರತದ ಸಂಸ್ಕೃತಿಯ ಪ್ರಕಾರ ಕಾರ್ಯನಿರ್ವಹಿಸಬೇಕಾಗುತ್ತದೆ” ಎಂದು ನ್ಯಾಯಮೂರ್ತಿ ಎಂ.ಆರ್‌ ಶಾ ಹೇಳಿದ್ದಾರೆ.

ಅಶ್ವಿನ್‌ ಉಪಾಧ್ಯಾಯ ಎಂಬುವವರು ಚಾರಿಟಿ ಹೆಸರಲ್ಲಿ ನಡೆಯುತ್ತಿರುವ ಮತಾಂತರವನ್ನು ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top