ನವದೆಹಲಿ: ರಾಷ್ಟ್ರಪತಿ ಭವನವು ಇಂದಿನಿಂದ ವಾರದಲ್ಲಿ ಐದು ದಿನಗಳವರೆಗೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರಲಿದೆ. ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಬಹುದು. ಆದರೆ ಗೆಜೆಟೆಡ್ ರಜಾದಿನಗಳಲ್ಲಿ ಇದು ಮುಚ್ಚಿರುತ್ತದೆ.
ವೀಕ್ಷಣೆಗ ಸಮಯಗಳು – 10 AM ನಿಂದ 11 AM ಮತ್ತು 11 AM ನಿಂದ 12 PM ಮತ್ತು 12 PM ನಿಂದ 1 PM ಮತ್ತು 2 PM ನಿಂದ 3 PM ಹಾಗೂ 3 PM ನಿಂದ 4 PM ಎಂದು ನಿಗದಿಪಡಿಸಬಹುದು.
ಗೆಜೆಟೆಡ್ ರಜಾದಿನಗಳನ್ನು ಹೊರತುಪಡಿಸಿ, ಮಂಗಳವಾರದಿಂದ ಭಾನುವಾರದವರೆಗೆ ವಾರದಲ್ಲಿ ಆರು ದಿನಗಳಲ್ಲಿ ಜನರು ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯ ಸಂಕೀರ್ಣಕ್ಕೆ ಭೇಟಿ ನೀಡಬಹುದು.
ಗಾರ್ಡ್ ಬದಲಾವಣೆ ಸಮಾರಂಭವನ್ನು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 8 ರಿಂದ 9 ರವರೆಗೆ ವೀಕ್ಷಿಸಬಹುದು.
ಸಂದರ್ಶಕರು ತಮ್ಮ ಸಮಯಗಳನ್ನು ವೆಬ್ಸೈಟ್ http://rashtrapatisachivalaya.gov.in/rbtourನಲ್ಲಿ ಆನ್ಲೈನ್ನಲ್ಲಿ ಬುಕ್ ಮಾಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.