ನವದೆಹಲಿ: ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಭಾರತದ ಸಂವಿಧಾನದ ಪೀಠಿಕೆ ಮತ್ತು ರಸಪ್ರಶ್ನೆಯನ್ನು ಆನ್ಲೈನ್ನಲ್ಲಿ ಓದಲು ಅವಕಾಶವನ್ನು ನೀಡುವ ಪೋರ್ಟಲ್ಗಳನ್ನು ವರ್ಚುವಲ್ ಆಗಿ ಪ್ರಾರಂಭಿಸಿದ್ದಾರೆ.
ಜನರು www.readpreamble.nic.in ಗೆ ಭೇಟಿ ನೀಡುವ ಮೂಲಕ ನಮ್ಮ ಸಂವಿಧಾನದ ಮುನ್ನುಡಿಯನ್ನು ಓದಬಹುದು ಮತ್ತು ರಸಪ್ರಶ್ನೆಗಾಗಿ www.constitutionquiz.nic.in ಗೆ ಭೇಟಿ ನೀಡಬಹುದು.
ಈ ಪೋರ್ಟಲ್ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಜೋಶಿ ಅವರು, ಸಂವಿಧಾನದ ಪೀಠಿಕೆಯನ್ನು 23 ಭಾಷೆಗಳಲ್ಲಿ ಬರೆಯಲಾಗಿದೆ. ಎಲ್ಲಾ ನಾಗರಿಕರು ತಮಗೆ ಸೂಕ್ತವಾದ ಭಾಷೆಯಲ್ಲಿ ಓದಬಹುದು ಎಂದು ಹೇಳಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಸಂವಿಧಾನದ ರಚನೆಯಲ್ಲಿ ಅಪ್ರತಿಮ ಕೊಡುಗೆಯನ್ನು ನೀಡುವ ಮೂಲಕ ಭಾರತದ ಭವಿಷ್ಯವನ್ನು ಮಹಾನ್ ಪ್ರಜಾಪ್ರಭುತ್ವವಾಗಿಸುವಲ್ಲಿ ಮಾರ್ಗದರ್ಶನ ನೀಡಿದ್ದಾರೆ ಎಂದಿದ್ದಾರೆ.
“ದೀನದಲಿತರ ಮತ್ತು ಜನರ ಸಬಲೀಕರಣದಲ್ಲಿ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ. ಸಂವಿಧಾನದ ಮೂಲ ರೂಪರೇಷೆಗಳು ನಾಗರಿಕರಲ್ಲಿ ಭ್ರಾತೃತ್ವವನ್ನು ಉತ್ತೇಜಿಸುವುದರ ಜೊತೆಗೆ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ” ಎಂದರು.
“ಸಾರ್ವಜನಿಕರಿಗೆ ಮೂಲಭೂತ ಹಕ್ಕುಗಳಿಗಿಂತ ಮೂಲಭೂತ ಕರ್ತವ್ಯಗಳಿಗೆ ಹೆಚ್ಚು ಬದ್ಧರಾಗಬೇಕು, ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳು ಇನ್ನೊಬ್ಬ ವ್ಯಕ್ತಿಯ ಮೂಲಭೂತ ಕರ್ತವ್ಯಗಳೊಂದಿಗೆ ಬೆಸೆದುಕೊಂಡಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.