ನವದೆಹಲಿ: ದೆಹಲಿಯ ಜನಪ್ರಿಯ ಜಮಾ ಮಸೀದಿ ಒಂಟಿಯಾಗಿ ಅಥವಾ ಗುಂಪಾಗಿ ಬರುವ ಮಹಿಳೆಯರ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಪುರುಷರೊಂದಿಗೆ ಬರುವ ಮಹಿಳೆಯರಿಗೆ ಪ್ರವೇಶವಿದೆ.
ಜಮಾ ಮಸೀದಿಯ ಪಿಆರ್ಒ ಸಬೀವುಲ್ಲಾಖಾನ್ ಮಾತನಾಡಿ, ‘ಮಹಿಳೆಯರು ಕುಟುಂಬ ಸಮೇತ ಬರುವುದಕ್ಕೆ ಯಾವುದೇ ನಿರ್ಬಂಧವಿಲ್ಲ, ವಿವಾಹಿತ ದಂಪತಿಗಳಿಗೂ ನಿರ್ಬಂಧವಿಲ್ಲ. ಆದರೆ ಕೇವಲ ಮಹಿಳೆಯರು ಒಂಟಿಯಾಗಿ ಅಥವಾ ಗುಂಪುಗಳಾಗಿ ಬರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ” ಎಂದಿದ್ದಾರೆ.
“ಮಹಿಳೆಯರು ಏಕಾಂಗಿಯಾಗಿ ಬಂದಾಗ ಅಸಮರ್ಪಕ ಕೃತ್ಯಗಳನ್ನು ಎಸಗಲಾಗುತ್ತದೆ, ವೀಡಿಯೊಗಳನ್ನು ಚಿತ್ರೀಕರಿಸಲಾಗುತ್ತದೆ, ಇವೆಲ್ಲವನ್ನೂ ತಡೆಯಲು ಈ ನಿಷೇಧ ವಿಧಿಸಲಾಗಿದೆ. ಕುಟುಂಬ ಅಥವಾ ವಿವಾಹಿತ ದಂಪತಿಗಳಿಗೆ ಯಾವುದೇ ನಿರ್ಬಂಧಗಳಿಲ್ಲ” ಎಂದಿದ್ದಾರೆ
ಜಾಮಾ ಮಸೀದಿ ಆಡಳಿತವು ಮಸೀದಿಯ ಹೊರಗೆ ಎಚ್ಚರಿಕೆ ಫಲಕಗಳನ್ನು ಹಾಕಿದ್ದು, ಹುಡುಗಿಯರಿಗೆ ಒಳಗೆ ಪ್ರವೇಶವಿಲ್ಲ ಎಂದು ಬರೆಯಲಾಗಿದೆ.
#WATCH| Delhi|Women's entry not banned. When women come alone-improper acts done, videos shot,ban is to stop this. No restrictions on families/married couples.Making it a meeting point inapt for religious places:Sabiullah Khan,Jama Masjid PRO on entry of women coming alone banned pic.twitter.com/HiOebKaiGr
— ANI (@ANI) November 24, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.