ನವದೆಹಲಿ: ಇಂಡೋ-ಪೆಸಿಫಿಕ್ ಪ್ರಾದೇಶಿಕ ಸಂವಾದದ ನಾಲ್ಕನೇ ಆವೃತ್ತಿಯು ನವದೆಹಲಿಯಲ್ಲಿ ಇಂದು ಪ್ರಾರಂಭವಾಗಲಿದೆ
“ಇಂಡೋ-ಪೆಸಿಫಿಕ್ ಪ್ರಾದೇಶಿಕ ಸಂವಾದದ ನಾಲ್ಕನೇ ಆವೃತ್ತಿ ದೆಹಲಿಯಲ್ಲಿ ಇಂದು ಪ್ರಾರಂಭವಾಗಲಿದೆ. ಈ ಸಂವಾದ ಭಾರತೀಯ ನೌಕಾಪಡೆಯ ಉನ್ನತ ಮಟ್ಟದ ಅಂತಾರಾಷ್ಟ್ರೀಯ ವಾರ್ಷಿಕ ಸಮ್ಮೇಳನವಾಗಿದೆ” ಎಂದು ಮೂಲಗಳು ತಿಳಿಸಿವೆ.
ನೌಕಾಪಡೆಯ ಜ್ಞಾನ ಪಾಲುದಾರ ನ್ಯಾಷನಲ್ ಮ್ಯಾರಿಟೈಮ್ ಫೌಂಡೇಶನ್ ಈ ಸಂವಾದದ ಮುಖ್ಯ ಸಂಘಟಕನಾಗಿದೆ.
ಇಂಡೋ-ಪೆಸಿಫಿಕ್ ಪ್ರಾದೇಶಿಕ ಸಂವಾದ-2022 ರ ವಿಷಯ ‘ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮವನ್ನು ಕಾರ್ಯಗತಗೊಳಿಸುವುದು’ ಎಂಬುದಾಗಿದೆ. ಮೂರು ದಿನಗಳ ಕಾಲ ಸಂವಾದ ನಡೆಯಲಿದ್ದು, ಇದು ಆರು ವೃತ್ತಿಪರ ಅವಧಿಗಳನ್ನು ಹೊಂದಿರುತ್ತದೆ. ಈ ವೇಳೆ ಜಾಗತಿಕವಾಗಿ ಹೆಸರಾಂತ ಭಾಷಣಕಾರರು ಮತ್ತು ಪ್ರಖ್ಯಾತ ಪ್ಯಾನೆಲಿಸ್ಟ್ಗಳು ಕಡಲ ಸಹಕಾರದ ಕ್ಷೇತ್ರಗಳನ್ನು ಹೇಗೆ ಅತ್ಯುತ್ತಮವಾಗಿ ಮತ್ತು ಅಂತರ್ಗತವಾಗಿ ಕಾರ್ಯಗತಗೊಳಿಸಬಹುದು ಎಂಬುದನ್ನು ಅವಲೋಕಿಸುತ್ತಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರ ಮಾರ್ಗದರ್ಶಕ ಭಾಷಣಗಳನ್ನು ಅಧಿವೇಶನ ಒಳಗೊಂಡಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.