ನವದೆಹಲಿ: ಸ್ಟೀಲ್ ಮೇಲಿನ ರಫ್ತು ಸುಂಕವನ್ನು ಹಿಂಪಡೆದಿರುವುದನ್ನು ಉಕ್ಕು ಉದ್ಯಮ ಸ್ವಾಗತಿಸಿದೆ. ಶನಿವಾರದಿಂದ ಜಾರಿಗೆ ಬರುವಂತೆ ಸರ್ಕಾರ ರಫ್ತು ಸುಂಕವನ್ನು ಹಿಂಪಡೆಯಲು ಸೂಚನೆ ನೀಡಿದೆ. ಈ ವರ್ಷದ ಮೇ ತಿಂಗಳಲ್ಲಿ ಸುಂಕ ವಿಧಿಸಲಾಗಿತ್ತು.
ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ನಿರ್ದಿಷ್ಟ ಕಬ್ಬಿಣ ಹಾಗೂ ಉಕ್ಕಿನ ಉತ್ಪನ್ನಗಳ ಮೇಲೆ ಯಾವುದೇ ರಫ್ತು ಸುಂಕವಿಲ್ಲ. ಮೇ ನಲ್ಲಿ ಉಕ್ಕಿನ ಬೆಲೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆಯೇರಿಕೆ ತಡೆಗೆ ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಅದರ ಭಾಗವಾಗಿಯೇ ಮೇ 22ರಿಂದ ಜಾರಿಗೆ ಬರುವಂತೆ ಉಕ್ಕಿನ ರಫ್ತಿನ ಮೇಲೆ ಶೇ. 15ರಷ್ಟು ಸುಂಕ ವಿಧಿಸಿತ್ತು. ಅಲ್ಲದೆ, ಶೇ.58ಕ್ಕಿಂತ ಅಧಿಕ ಕಬ್ಬಿಣದ ಅಂಶ ಹೊಂದಿರುವ ಕಬ್ಬಿಣದ ಅದಿರಿನ ಮೇಲಿನ ರಫ್ತು ಸುಂಕವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಳ ಮಾಡಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಕಾರಣ ಉಕ್ಕಿನ ಬೆಲೆಯಲ್ಲಿ ಏರಿಕೆ ಆಗುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿತ್ತು. ಹಾಗೆಯೇ ಕಲ್ಲಿದ್ದಲು ಸೇರಿದಂತೆ ಪ್ರಮುಖ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನುತಗ್ಗಿಸಿತ್ತು. ಸರ್ಕಾರದ ಈ ಎಲ್ಲ ಕ್ರಮಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯಲ್ಲಿ ಇಳಿಕೆಯಾಗಿತ್ತು.
“ಪ್ರಸ್ತುತ ಕ್ರಮಗಳು ದೇಶೀಯ ಉಕ್ಕು ಉದ್ಯಮಕ್ಕೆ ಪೂರಕತೆಯನ್ನು ಒದಗಿಸುತ್ತವೆ ಮತ್ತು ರಫ್ತುಗಳನ್ನು ಹೆಚ್ಚಿಸುತ್ತವೆ” ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ಆಂಥ್ರಾಸೈಟ್/ಪಿಸಿಐ ಮತ್ತು ಕೋಕಿಂಗ್ ಕಲ್ಲಿದ್ದಲು ಮತ್ತು ಫೆರೋನಿಕಲ್ ಮೇಲಿನ ಆಮದು ಸುಂಕವು ಶೇಕಡಾ 2.5 ಆಗಿದ್ದರೆ, ಕೋಕ್ ಮತ್ತು ಸೆಮಿ-ಕೋಕ್ಗೆ ಸುಂಕ ಶೇಕಡಾ 5 ಆಗಿರುತ್ತದೆ. ಮೇ ತಿಂಗಳಿನಲ್ಲಿ ಇವುಗಳಿಗೆ ವಿನಾಯಿತಿ ನೀಡಲಾಗಿತ್ತು.
Government withdraws export duty on Steel with effect from 19th November, 2022
Read more ➡️ https://t.co/aRebElpUht pic.twitter.com/wPgqF0ZpiM
— Ministry of Finance (@FinMinIndia) November 19, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.