ನವದೆಹಲಿ: ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಳೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಮೊದಲ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ.
ವಿಕ್ರಮ್-ಸಬಾರ್ಬಿಟಲ್ (ವಿಕೆಎಸ್) ರಾಕೆಟ್ನ ಐತಿಹಾಸಿಕ ಚೊಚ್ಚಲ ಖಾಸಗಿ ಉಡಾವಣೆಯನ್ನು ವೀಕ್ಷಿಸಲು ಶ್ರೀಹರಿಕೋಟಾದಲ್ಲಿ ಉಪಸ್ಥಿತನಿರುವುದಾಗಿ ಬಾಹ್ಯಾಕಾಶ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ವಿಕ್ರಮ್ ಸಬಾರ್ಬಿಟಲ್ ಉಡಾವಣೆಯು ವೆಚ್ಚ ಪರಿಣಾಮಕಾರಿ ಉಪಗ್ರಹ ಉಡಾವಣಾ ಸೇವೆಗಳಿಗೆ ಉತ್ತಮ ವೇದಿಕೆ ದೊರೆತಿರುವುದನ್ನು ಸೂಚಿಸುತ್ತದೆ. ಖಾಸಗಿ ಸಹಭಾಗಿತ್ವಕ್ಕಾಗಿ 2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಕ್ಷೇತ್ರವನ್ನು ಅನ್ಲಾಕ್ ಮಾಡಿದ ನಂತರ ಇಸ್ರೋದ ಪ್ರಯಾಣದಲ್ಲಿ ಇದು ಪ್ರಮುಖ ಮೈಲಿಗಲ್ಲು ಎಂದು ಸಚಿವರು ಬಣ್ಣಿಸಿದ್ದಾರೆ.
ಸರ್ಕಾರೇತರ ಘಟಕ ಮತ್ತು ಸ್ಟಾರ್ಟ್ಅಪ್ ಆದ ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ವಿಕೆಎಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಸುಮಾರು 550 ಕಿಲೋಗ್ರಾಂಗಳಷ್ಟು ದ್ರವ್ಯರಾಶಿಯನ್ನು ಹೊಂದಿರುವ ಏಕ ಹಂತದ ಸ್ಪಿನ್ ಸ್ಥಿರವಾದ ಘನ ಪ್ರೊಪೆಲ್ಲಂಟ್ ರಾಕೆಟ್ ಆಗಿದೆ. ರಾಕೆಟ್ ಗರಿಷ್ಠ 101 ಕಿಲೋಮೀಟರ್ ಎತ್ತರಕ್ಕೆ ಹೋಗಿ ಸಮುದ್ರಕ್ಕೆ ಚಿಮ್ಮಲಿದೆ. ಉಡಾವಣೆಯ ಒಟ್ಟಾರೆ ಅವಧಿಯು 300 ಸೆಕೆಂಡುಗಳು ಎಂದು ಇಸ್ರೋ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.