ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ 6.77% ಕುಸಿತವನ್ನು ಕಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಶೇಕಡ 7.41ರಷ್ಟು ದಾಖಲಾಗಿದ್ದ ಹಣದುಬ್ಬರ ಗಣನೀಯವಾಗಿ ಕಡಿಮೆಯಾಗಿದೆ. ಆಹಾರ ಪದಾರ್ಥಗಳ ಬೆಲೆ ಇಳಿಕೆಯಿಂದಾಗಿ ಹಣದುಬ್ಬರದ ಪ್ರಮಾಣ ಕಡಿಮೆಯಾಗಿದೆ. ಸಗಟು ಸೂಚ್ಯಂಕ ಕೂಡ ಕುಸಿತ ಕಂಡಿದೆ.
ಮತ್ತೊಂದೆಡೆ ಸಗಟು ದರ ಸೂಚ್ಯಂಕವು ಕಳೆದ 20 ತಿಂಗಳಲ್ಲೇ ಗರಿಷ್ಠ ಕುಸಿತವನ್ನು ದಾಖಲಿಸಿದೆ. 2021ರ ಮಾರ್ಚ್ ಬಳಿಕ ಈ ವರ್ಷದ ಅಕ್ಟೋಬರ್ ನಲ್ಲಿ ಸೂಚ್ಯಂಕ ಶೇ 8.93ಕ್ಕೆ ಇಳಿದಿದೆ. ಸೆಪ್ಟೆಂಬರ್ ನಲ್ಲಿ ಈ ಪ್ರಮಾಣ ಶೇ10.70ರಷ್ಟಾಗಿತ್ತು. ಜಾಗತಿಕ ಸರಕು ಬೆಲೆಗಳ ಇಳಿಕೆ ಮತ್ತು ಅನುಕೂಲಕರ ಮೂಲಾಂಶಗಳು ಪ್ರಮುಖ ಕಾರಣ ಎಂದು ಸಿಎಆರ್ಎ ರೇಟಿಂಗ್ ನಿರ್ದೇಶಕ ರಣಜಿ ಸಿನ್ಹಾ ಹೇಳಿದ್ದಾರೆ.
ಸಗಟು ಸೂಚ್ಯಂಕ ಇಳಿದಿದ್ದರೂ ಅದರ ಪ್ರಯೋಜನ ಗ್ರಾಹಕರಿಗೆ ಇನ್ನೂ ವರ್ಗಾವಣೆಯಾಗಿಲ್ಲ. ದುರ್ಬಲ ರೂಪಾಯಿ ಮತ್ತು ಆಹಾರ ಹಣದುಬ್ಬರದಿಂದಾಗಿ ಆಮದು ಹಣದುಬ್ಬರ ಹೆಚ್ಚಾಗಲಿದ್ದು, ಸಗಟು ಹಣದುಬ್ಬರದ ಮೇಲಿನ ಒತ್ತಡ ಇನ್ನೂ ಕೆಲಕಾಲ ಮುಂದುವರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಪ್ರಾಥಮಿಕ ಪದಾರ್ಥಗಳ ಹಣದುಬ್ಬರದ ದೂರ ಶೇ 11.04 ಇದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಈ ಪ್ರಮಾಣ ಶೇ 8.33ರಷ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.