ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಘಟಕದ(ಡಿಯುಎಸ್ಯು) ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿ ಭರ್ಜರಿ ವಿಜಯವನ್ನು ಸಾಧಿಸಿದೆ. ಎಎಪಿಗೆ ಈ ಚುನಾವಣೆ ತೀವ್ರ ಮುಖಭಂಗವನ್ನು ಉಂಟುಮಾಡಿದೆ.
ಎಲ್ಲಾ ನಾಲ್ಕು ಸ್ಥಾನಗಳನ್ನೂ ಎಬಿವಿಪಿ ವಶಪಡಿಸಿಕೊಂಡಿದೆ. ಡಿಯುಎಸ್ಯುನ ಅಧ್ಯಕ್ಷನಾಗಿ ಸತಿಂದರ್ ಔವ್ನಾ, ಉಪಾಧ್ಯಕ್ಷರಾಗಿ ಸನ್ನಿ ದೆಢಾ, ಅಂಜಲಿ ರಾಣಾ ಕಾರ್ಯದರ್ಶಿಯಾಗಿ, ಚತ್ತರ್ಪಲ್ ಯಾದವ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ನ್ಯಾಷನಲ್ ಸ್ಟುಡೆಂಟ್ ಯೂನಿಯನ್ ಆಫ್ ಇಂಡಿಯಾ ಮತ್ತು ಎಎಪಿಯ ಸ್ಟುಡೆಂಟ್ ವಿಂಗ್ ಛತ್ರ ಯುವ ಸಂಘರ್ಷ್ ಸಮಿತಿ ಈ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಗೆಗಿನ ಆಸಕ್ತಿಯನ್ನು ಯುವ ಜನತೆ ಕಳೆದುಕೊಂಡಿದೆ ಎಂಬುದನ್ನು ಈ ಚುನಾವಣೆ ಸಾಬೀತುಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.