ನವದೆಹಲಿ: ದಿ ತಾಷ್ಕೆಂಟ್ ಫೈಲ್ಸ್, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಭಾರಿ ಜನಪ್ರಿಯತೆಯನ್ನು ಗಳಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇದೀಗ ತಮ್ಮ ಮುಂದಿನ ಸಿನಿಮಾದ ಶೀರ್ಷಿಕೆಯನ್ನು ಘೋಷಣೆ ಮಾಡಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’ ಎಂಬುದು ಅವರ ಮುಂದಿನ ಸಿನಿಮಾವಾಗಿದೆ. ಕೊರೋನಾ ಸಂದರ್ಭದಲ್ಲಿ ವ್ಯಾಕ್ಸಿನ್ ಸಂಬಂಧಿಸಿದಂತೆ ಭಾರತದಲ್ಲಿ ನಡೆದ ಬೆಳವಣಿಗೆಗಳ ಕುರಿತು ಈ ಸಿನಿಮಾ ಇದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಗ್ನಿಹೋತ್ರಿಯವರು, “ದಿ ವಾಕ್ಸಿನ್ ವಾರ್ ಪ್ರಸ್ತುತಪಡಿಸುತ್ತಿದ್ದೇನೆ. ನಿಮಗೆ ತಿಳಿಯದ ಭಾರತ ಹೋರಾಡಿದ ಮತ್ತು ತನ್ನ ವಿಜ್ಞಾನ, ಧೈರ್ಯ ಮತ್ತು ಶ್ರೇಷ್ಠ ಭಾರತೀಯ ಮೌಲ್ಯಗಳೊಂದಿಗೆ ಜಯಿಸಿದ ರೋಮಾಂಚಕ ಸತ್ಯ ಕಥೆ ಇದಾಗಿದೆ” ಎಂದಿದ್ದಾರೆ.
ಸಿನಿಮಾ 2023ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.
ಹಿಂದಿ, ಇಂಗ್ಲಿಷ್, ಮರಾಠಿ, ಗುಜರಾತಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ 11 ಭಾರತೀಯ ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ.
ಸತ್ಯ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದರಲ್ಲಿ ನಿಪುಣನಾಗಿರುವ ವಿವೇಕ್ ಅಗ್ನಿಹೋತ್ರಿ ಅವರು ಈ ಬಾರಿ ಆಯ್ದುಕೊಂಡಿರುವ ವಿಷಯ ತುಂಬಾ ವಿಭಿನ್ನವಾಗಿದೆ. ಹೀಗಾಗಿ ಸಹಜವಾಗಿಯೇ ಸಿನಿಮಾದ ಬಗ್ಗೆ ಕುತೂಹಲ ಮೂಡಿದೆ.
ANNOUNCEMENT:
Presenting ‘THE VACCINE WAR’ – an incredible true story of a war that you didn’t know India fought. And won with its science, courage & great Indian values.
It will release on Independence Day, 2023. In 11 languages.
Please bless us.#TheVaccineWar pic.twitter.com/T4MGQwKBMg
— Vivek Ranjan Agnihotri (@vivekagnihotri) November 10, 2022
For the first time ever an Indian film will release in 11 Indian languages. At @i_ambuddha & @AAArtsOfficial it’s our humble initiative to help integrate Indian film industry as one. #BharatKaApnaCinema pic.twitter.com/AZKnPGiskn
— Vivek Ranjan Agnihotri (@vivekagnihotri) November 10, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.