ನವದೆಹಲಿ: 2022 ರ ಮೊದಲಾರ್ಧದಲ್ಲಿ ಸೌರ ಉತ್ಪಾದನೆಯ ಮೂಲಕ ಭಾರತವು USD 4.2 ಶತಕೋಟಿ ಇಂಧನ ವೆಚ್ಚವನ್ನು ಉಳಿಸಿದೆ ಎಂದು ಗುರುವಾರ ಬಿಡುಗಡೆಯಾದ ಹೊಸ ವರದಿಯೊಂದು ತಿಳಿಸಿದೆ.
ಎನರ್ಜಿ ಥಿಂಕ್ ಟ್ಯಾಂಕ್ ಎಂಬರ್, ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆಂಡ್ ಕ್ಲೀನ್ ಏರ್ ಮತ್ತು ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಆಂಡ್ ಫೈನಾನ್ಶಿಯಲ್ ಅನಾಲಿಸಿಸ್ನ ವರದಿಯು ಕಳೆದ ದಶಕದಲ್ಲಿ ಸೌರಶಕ್ತಿಯ ಬೆಳವಣಿಗೆಯನ್ನು ವಿಶ್ಲೇಷಿಸಿದೆ.
ಸೌರ ಸಾಮರ್ಥ್ಯವನ್ನು ಹೊಂದಿರುವ ಟಾಪ್ 10 ಆರ್ಥಿಕತೆಗಳಲ್ಲಿ ಮೊದಲ ಐದು ಸ್ಥಾನ ಚೀನಾ, ಜಪಾನ್, ಭಾರತ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ಪಡೆದುಕೊಂಡಿದೆ.
“ಭಾರತದಲ್ಲಿ, ಸೌರ ಉತ್ಪಾದನೆಯು ವರ್ಷದ ಮೊದಲಾರ್ಧದಲ್ಲಿ USD 4.2 ಬಿಲಿಯನ್ ಇಂಧನ ವೆಚ್ಚವನ್ನು ಉಳಿಸಿದೆ. ಇದು 19.4 ಮಿಲಿಯನ್ ಟನ್ ಕಲ್ಲಿದ್ದಲಿನ ಅಗತ್ಯವನ್ನು ತಪ್ಪಿಸಿದೆ” ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.