ನವದೆಹಲಿ: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಸಾಕಷ್ಟು ಡ್ರಾಮಾದ ಬಳಿಕ ಅಂತಿಮವಾಗಿ $44 ಬಿಲಿಯನ್ ಸ್ವಾಧೀನ ಒಪ್ಪಂದವನ್ನು ಪೂರ್ಣಗೊಳಿಸುವ ಮೂಲಕ ಟ್ವಿಟರ್ ಅನ್ನು ಖರೀದಿ ಮಾಡಿದ್ದಾರೆ.
ಟ್ವಿಟರ್ನಲ್ಲಿ ಚುಕ್ಕಾಣಿ ಹಿಡಿದ ತಕ್ಷಣ, ಮಸ್ಕ್ ಭಾರತೀಯ ಮೂಲದ ಸಿಇಒ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಕಂಪನಿಯ ನೀತಿ ಮುಖ್ಯಸ್ಥ ವಿಜಯ ಗಡ್ಡೆ ಮತ್ತು ಇತರರನ್ನು ವಜಾಗೊಳಿಸಿದ್ದಾರೆ.
ಅಗರವಾಲ್ $38.7 ಮಿಲಿಯನ್, ಸೆಗಲ್ $25.4 ಮಿಲಿಯನ್, ಗಡ್ಡೆ $12.5 ಮಿಲಿಯನ್ ಮತ್ತು ಪರ್ಸೋನೆಟ್ $11.2 ಮಿಲಿಯನ್ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ, ಗುರುವಾರ, ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ನ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಮುಂಚಿತವಾಗಿ ಕೈಯಲ್ಲಿ ಸಿಂಕ್ನೊಂದಿಗೆ ಟ್ವಿಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಈ ಬಗೆಗಿನ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು ಕೂಡ.
ಈ ವರ್ಷದ ಏಪ್ರಿಲ್ 13 ರಂದು ಟ್ವಿಟರ್ ಖರೀದಿಸುವುದಾಗಿ ಎಲೋನ್ ಮಾಸ್ಕ್ ಪ್ರಕಟಿಸಿದ್ದರು. ಪ್ರತಿ ಷೇರಿಗೆ $54.2 ದರದಲ್ಲಿ $44 ಶತಕೋಟಿಗೆ ಸೋಶಿಯಲ್ ಮೀಡಿಯಾ ಪ್ಲಾಟ್ಫಾರಂ ಅನ್ನು ಖರೀದಿಸಲು ಪ್ರಸ್ತಾಪಿಸಿದ್ದಾರೆ. ಆದರೆ ನಂತರ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಕಾರಣ ನೀಡಿ ಒಪ್ಪಂದವನ್ನು ರದ್ದು ಮಾಡಿದ್ದರು. ಇದರ ವಿರುದ್ಧ ಟ್ವಿಟರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಕ್ಟೋಬರ್ ಆರಂಭದಲ್ಲಿ, ಮಾಸ್ಕ್ ತನ್ನ ನಿಲುವನ್ನು ಬದಲಿಸಿ ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಕೊಂಡರು. ಡೆಲವೇರ್ ನ್ಯಾಯಾಲಯವು ಅಕ್ಟೋಬರ್ 28 ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸಲು ಸೂಚನೆ ನೀಡಿತ್ತು. ಆದರೆ ಒಂದು ದಿನ ಮುಂಚಿತವಾಗಿ ಅಂದರೆ ನಿನ್ನೆ ಎಲೋನ್ ಟ್ವಿಟರ್ ಕಛೇರಿಗೆ ಭೇಟಿ ನೀಡಿ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದಾರೆ.
Entering Twitter HQ – let that sink in! pic.twitter.com/D68z4K2wq7
— Elon Musk (@elonmusk) October 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.