News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಜಾಬ್‌ ಧರಿಸದೆ ಆಡಿದ ಇರಾನಿ ಮಹಿಳೆಗೆ ಅಭೂತಪೂರ್ವ ಸ್ವಾಗತ

ಟೆಹ್ರಾನ್: ಹಿಜಾಬ್ ಇಲ್ಲದೆ ವಿದೇಶದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಸಂಚಲನ ಮೂಡಿಸಿದ್ದ ಇರಾನ್ ಪರ್ವತಾರೋಹಿಯೊಬ್ಬರು ಬುಧವಾರ ಟೆಹ್ರಾನ್‌ಗೆ ಹಿಂದಿರುಗಿದ ನಂತರ   ವೀರೋಚಿತ ಸ್ವಾಗತವನ್ನು ಪಡೆದುಕೊಂಡಿದ್ದಾರೆ.

ಒಂದು ತಿಂಗಳಿನಿಂದ ಮಹ್ಸಾ ಅಮಿನಿ ಎಂಬುವವರ ಸಾವಿನಿಂದ ಭುಗಿಲೆದ್ದ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ಇರಾನ್‌ ಅನ್ನು ತಲ್ಲಣಗೊಳಿಸಿದ್ದವು. ಇಲ್ಲಿನ ಮಹಿಳೆಯರು ಹಿಜಾಬ್‌ ಕಿತ್ತೊಗೆದು ಮತ್ತು ತಲೆ ಕೂದಲು ಕತ್ತರಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಈ ನಡುವೆಯೇ ಎಲ್ನಾಜ್ ರೆಕಾಬಿ ದಕ್ಷಿಣ ಕೊರಿಯಾದಲ್ಲಿ ನಡೆದ ಸ್ಪರ್ಧೆಯ ನಂತರ ಟೆಹ್ರಾನ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ್ದಾರೆ. ಹಿಜಾಬ್‌ ಧರಿಸದೆ ಸ್ಪರ್ಧೆಯಲ್ಲಿ ಭಾಗಿಯಾದ ಇವರಿಗೆ ಭರ್ಜರಿ ಸ್ವಾಗತ ದೊರೆತಿದೆ.

ಆದರೆ ಇವರು ಹಿಜಾಬ್‌ ಧರಿಸದೆ ಇರುವುದಕ್ಕೆ ಆಡಳಿತದ ಕ್ಷಮೆ ಕೇಳಿದ್ದಾರೆ. ಆದರೆ ಒತ್ತಡ ಮತ್ತು ಭಯದ ಕಾರಣದಿಂದ ಅವರು ಕ್ಷಮೆಯಾಚನೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಅಲ್ಲದೇ ಆಕೆ ನಮ್ಮ ಹೀರೋ ಎಂದು ಬಣ್ಣಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top