News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಗತಿಕ ಹಸಿವು ಸೂಚ್ಯಂಕ ವರದಿಯನ್ನು ತಿರಸ್ಕರಿಸಿದ ಭಾರತ

ನವದೆಹಲಿ: ಇತ್ತೀಚಿಗೆ ಬಿಡುಗಡೆಯಾದ ಗ್ಲೋಬಲ್ ಹಂಗರ್ ಇಂಡೆಕ್ಸ್ (ಜಿಎಚ್‌ಐ) 2022 ಅನ್ನು ಭಾರತ ತಿರಸ್ಕರಿಸಿದೆ. ಈ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿರುವ ಕೇಂದ್ರವು,  ಈ ವಾರ್ಷಿಕ ವರದಿಯು ಪಕ್ಷಪಾತದಿಂದ ಕೂಡಿದೆ ಮತ್ತು ತಳಮಟ್ಟದಿಂದ ಸಂಪರ್ಕ ಕಡಿತಗೊಂಡಿದೆ ಎಂದು  ಟೀಕಿಸಿದೆ.

ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ 121 ರಾಷ್ಟ್ರಗಳ ಪೈಕಿ ಭಾರತವು 107 ನೇ ಸ್ಥಾನದಲ್ಲಿದೆ. ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ಶ್ರೀಲಂಕಾ 64ನೇ ಸ್ಥಾನದಲ್ಲಿದೆ.  ನೇಪಾಳ 81, ಬಾಂಗ್ಲಾದೇಶ 84 ಮತ್ತು ಪಾಕಿಸ್ತಾನ 99ನೇ ಸ್ಥಾನದಲ್ಲಿದೆ.

ಶ್ರೀಲಂಕಾ ಮತ್ತು ಪಾಕಿಸ್ಥಾನಕ್ಕಿಂತ ಭಾರತದಲ್ಲಿ ಹಸಿವು ಹೆಚ್ಚಾಗಿದೆ ಎಂಬಂತೆ ಬಿಂಬಿಸುವ ಈ ಸೂಚ್ಯಂಕದ ವಿರುದ್ಧ ಕೇಂದ್ರ ಸರ್ಕಾರ ಕೆಂಡಾಮಂಡಲವಾಗಿದೆ.

“ತನ್ನ ಜನರಿಗೆ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸದ ರಾಷ್ಟ್ರವಾಗಿ ಭಾರತದ ಇಮೇಜ್ ಅನ್ನು ಕಳಂಕಗೊಳಿಸುವ ನಿರಂತರ ಪ್ರಯತ್ನವು ಮತ್ತೊಮ್ಮೆ ಗೋಚರಿಸುತ್ತದೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

“ವಾರ್ಷಿಕವಾಗಿ ಬಿಡುಗಡೆಯಾಗುವ ಜಾಗತಿಕ ಹಸಿವಿನ ಸೂಚ್ಯಂಕದ ವಿಶಿಷ್ಟ ಲಕ್ಷಣವೆಂದರೆ ತಪ್ಪು ಮಾಹಿತಿ” ಎಂದು ವರದಿಯನ್ನು ಅದು ಟೀಕಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top