News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಆರಂಭವಾಗಲಿದೆ ಬಿಜೆಪಿಯ ʼಗುಜರಾತ್ ಗೌರವ್ʼ ಯಾತ್ರೆ

ಅಹ್ಮದಾಬಾದ್:‌ ಬಿಜೆಪಿಯ ಗುಜರಾತ್ ಗೌರವ್ ಯಾತ್ರೆ ಇಂದು ಆರಂಭವಾಗುತ್ತಿದ್ದು, ಇದರಲ್ಲಿ ಹಲವು ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ಯಾತ್ರೆ 10 ದಿನಗಳಲ್ಲಿ 5734 ಕಿ.ಮೀ ಕ್ರಮಿಸಲಿದ್ದು, 144 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಜನರನ್ನು ತಲುಪಲು  ಐದು ವಿಭಿನ್ನ ಮಾರ್ಗಗಳಲ್ಲಿ ಬಿಜೆಪಿ ‘ಗುಜರಾತ್ ಗೌರವ ಯಾತ್ರೆ’ಯನ್ನು ಪ್ರಾರಂಭಿಸಲಿದೆ.

ಬುಧವಾರ ಮತ್ತು ಗುರುವಾರ ಕ್ರಮವಾಗಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಗಮನಾರ್ಹ ಸಂಗತಯೆಂದರೆ,  2002ರ ರಾಜ್ಯ ಅಸೆಂಬ್ಲಿ ಚುನಾವಣೆಯ ಮೊದಲು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮೊದಲ ‘ಗೌರವ್ ಯಾತ್ರೆ’ ಕೈಗೊಂಡರು. 2017 ರಲ್ಲಿ ಆ ವರ್ಷದ ರಾಜ್ಯ ಚುನಾವಣೆಗೆ ಮುಂಚಿತವಾಗಿ ಎರಡನೇ ‘ಗೌರವ್ ಯಾತ್ರೆ’ ಆಯೋಜಿಸಲಾಗಿತ್ತು.

2002ರಲ್ಲಿ ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 127 ಸ್ಥಾನಗಳನ್ನು ಗೆದ್ದಿತ್ತು. 2017 ರಲ್ಲಿ ಕೇಸರಿ ಪಕ್ಷವು 99 ಸ್ಥಾನಗಳನ್ನು ಮತ್ತು ಪ್ರತಿಪಕ್ಷ ಕಾಂಗ್ರೆಸ್ 77 ಸ್ಥಾನಗಳನ್ನು ಗಳಿಸಿತು.

ನಡ್ಡಾ ಅವರು ಬುಧವಾರ ದ್ವಾರಕಾದಿಂದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಯಾತ್ರೆಯ ಮತ್ತೊಂದು ಮಾರ್ಗವು ಮೆಹ್ಸಾನಾ ಜಿಲ್ಲೆಯ ದೇವಾಲಯ ನಗರವಾದ ಬಹುಚರಾಜಿಯಿಂದ ಇರುತ್ತದೆ. ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಉಪಸ್ಥಿತರಿರುತ್ತಾರೆ ಎಂದು ಬಿಜೆಪಿ ಮಂಗಳವಾರ ತಿಳಿಸಿದೆ.

ಶಾ ಗುರುವಾರ ಮೂರು ಮಾರ್ಗಗಳಲ್ಲಿ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ- ಅಹಮದಾಬಾದ್ ಜಿಲ್ಲೆಯ ಝಂಝಾರ್ಕಾ ಗ್ರಾಮದ ಸಂತ ಸವಯ್ಯನಾಥ ದೇವಸ್ಥಾನದಿಂದ ಮತ್ತು ಇತರ ಎರಡು ಮಾರ್ಗಗಳು ನವಸಾರಿ ಜಿಲ್ಲೆಯ ವಂಸ್ಡಾ ತಾಲೂಕಿನ ಉನೈ ಮಾತಾ ದೇವಸ್ಥಾನದಿಂದ.

ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ವಿವಿಧೆಡೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಡ್ಡಾ ಅವರಲ್ಲದೆ, ಕೇಂದ್ರ ಸಚಿವ ಭೂಪೇಂದ್ರ ಯಾದವ್, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಸಚಿವ ಜವಾಹರ್ ಚಾವ್ಡಾ ಅವರು ಬುಧವಾರ ದ್ವಾರಕಾದಲ್ಲಿ ಇರಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top