ನ್ಯೂಯಾರ್ಕ್: ಬ್ರ್ಯಾಂಡೆಡ್ ವಸ್ತ್ರಗಳು, ವಿಧ ವಿಧದ ಆಭರಣಗಳೊಂದಿಗೆ ದುಬಾರಿ ಜೀವನ ನಡೆಸುತ್ತಿದ್ದ ಯುಎಸ್ನ ಮನ್ಹಟ್ಟನ್ನಲ್ಲಿ ವಾಸವಾಗಿದ್ದ ಫ್ಯಾಷನ್ ಡಿಸೈನರ್ ಈಗ ಸರಳ ಬಿಳಿಯ ನಿಲುವಂಗಿ ಧರಿಸಿ, ತಾನು ಪಡೆವ ಭಿಕ್ಷೆಯಿಂದಲೇ ಉಣ್ಣುತ್ತ ಬರಿಗಾಲಿನಲ್ಲಿ ನಡೆದಾಡುತ್ತಿದ್ದಾಳೆ.
ದಿನದಲ್ಲಿ ಹಲವು ಗಂಟೆಗಳ ಕಾಲ ದುಡಿಯುತ್ತಾ ಕೈತುಂಬಾ ಹಣ ಗಳಿಸುತ್ತಿದ್ದ ನಿಶಾ ಕಪಾಕ್ಷಿ, ಈಗ ಆಧ್ಯಾತ್ಮಿಕ ಮಂತ್ರಗಳು, ಸ್ತುತಿಗಳನ್ನು ಪಠಣ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ನ್ಯೂಯಾರ್ಕ್ನ ಜೆ ಕ್ರ್ಯೂ ಕಂಪೆನಿಯೊಂದರಲ್ಲಿ ಫ್ಯಾಷನ್ ಡಿಸೈನ್ ವ್ಯಾಪಾರಸ್ಥೆಯಾಗಿದ್ದ ಇವರು, ದೀಕ್ಷೆ ಪಡೆಯುವ ಮೂಲಕ ಪ್ರಾಪಂಚಿಕ ಜೀವನದ ಸಂತೋಷಗಳನ್ನು ತ್ಯಜಿಸಿ ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆದಿದ್ದಾರೆ.
ಭಾರತದಲ್ಲಿ ಸುಮಾರು 14,500 ಜೈನ ಸನ್ಯಾಸಿಗಳಿದ್ದು, ಅದಲ್ಲಿ ಶೇ.75ರಷ್ಟು ಮಹಿಳೆಯರೇ ಆಗಿದ್ದಾರೆ. ಸಮುದಾಯದ ಜನರ ಪ್ರಕಾರ 15ರಿಂದ 27 ವರ್ಷ ವಯಸ್ಕರಲ್ಲಿ ತಮ್ಮ ಅಸ್ತಿತ್ವದ ಪ್ರಶ್ನೆ ಮೂಡುತ್ತಿದ್ದು, ಆಧ್ಯಾತ್ಮಿಕ ಮಾರ್ಗದ ಹಾದಿಯನ್ನೇ ಹಿಡಿಯುತ್ತಾರೆ. ಜಾರ್ಖಂಡ್ನ ಸಮ್ಮತ್ ಶಿಖರ್ ತೀರ್ಥದಲ್ಲಿ ಉಳಿದಿರುವ ಕಪಾಕ್ಷಿ, ಜೈನ ತತ್ವಗಳಲ್ಲಿ ಆಸಕ್ತಿ ತೋರುವ ಮುನ್ನ ಆಕೆ ಓರ್ವ ಪ್ರತಿಭಾವಂತ ಹಾಗೂ ಹಾಸ್ಯ ಪ್ರಿಯ ವಿದ್ಯಾರ್ಥಿಯಾಗಿದ್ದಳು ಎಂದು ಆಕೆಯ ತಂದೆ ಮನೋಜ್ ಹೇಳಿದ್ದಾರೆ.
ಅಮೇರಿಕದಾದ್ಯಂತ ಸುಮಾರು 300 ಸ್ಟೋರ್ಗಳನ್ನು ಹೊಂದಿರುವ ಈ ಫ್ಯಾಷನ್ ಉದ್ಯಮದಿಂದ ಉತ್ತಮ ಸಂಬಳ ಪಡೆಯುತ್ತಿದ್ದರೂ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಳನ್ನು ಪಡೆಯಲಾಗಿಲ್ಲ. ತಾನು ಮಾಡುತ್ತಿದ್ದ ಕೆಲಸದಲ್ಲಿ ಯಾವುದೇ ಅರ್ಥವಿರಲಿಲ್ಲ. ನಾವು ಕಂಪೆನಿಯ ಕೈಗೊಂಬೆಗಳಾಗಿದ್ದೇವೆ. ನನ್ನ ಸಂತೋಷದ ಮೂಲ ಇತರರ ಮೇಲೆ ಅವಲಂಭಿತವಾಗಿದೆ ಎನ್ನುತ್ತಾರೆ ಕಪಾಕ್ಷಿ.
ಜೈನ ಸಮುದಾಯದ ಸ್ನೇಹಿತರನ್ನು ಭೇಟಿ ಮಾಡಿ, ಚರ್ಚಿಸಿ ಜೈನ ದೇವಾಲಯಗಳಿಗೆ ಹೋಗಲು ಆರಂಭಿಸಿದ ಬಳಿಕ ಬ್ರ್ಯಾಂಡೆಡ್ ಬಟ್ಟೆಗಳು, ಪಾರ್ಟಿಗಳು, ಮನೋರಂಜನಾ ಜೀವನವನ್ನು ತ್ಯಜಿಸಿ ಆತ್ಮಶಾಂತಿ ಪಡೆಯಲು ದೀಕ್ಷೆ ಪಡೆದಿರುವುದಾಗಿ ಕಪಾಕ್ಷಿ ವಿವರಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.