News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದಲ್ಲೇ ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ಬಾಲ್ಯವಿವಾಹ: ಕೇಂದ್ರದ ವರದಿ

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಜನಸಂಖ್ಯಾ ಮಾದರಿ ಸಮೀಕ್ಷೆಯ ಪ್ರಕಾರ, ದೇಶದಲ್ಲೇ ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿವೆ.

ಗೃಹ ವ್ಯವಹಾರಗಳ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯಿಂದ ಹೊರತರಲಾಗಿರುವ ಸಮೀಕ್ಷೆಯ ಪ್ರಕಾರ ಜಾರ್ಖಂಡ್‌ನಲ್ಲಿ 18 ವಯಸ್ಸಿಗಿಂತ ಮುಂಚಿತವಾಗಿ ಮದುವೆಯಾಗುವ ಹುಡುಗಿಯರ ಶೇಕಡಾವಾರು ಪ್ರಮಾಣವು 5.8 ರಷ್ಟಿದೆ.

“18 ವರ್ಷ ವಯಸ್ಸನ್ನು ತಲುಪುವ ಮೊದಲು ವಿವಾಹವಾದ ಮಹಿಳೆಯರ ಶೇಕಡಾವಾರು ರಾಷ್ಟ್ರೀಯ ಮಟ್ಟದಲ್ಲಿ 1.9 ಆಗಿದೆ. ಈ ಪ್ರಮಾಣ ಕೇರಳದಲ್ಲಿ 0.0 ಆಗಿದ್ದರೆ, ಜಾರ್ಖಂಡ್‌ನಲ್ಲಿ 5.8 ಆಗಿದೆ” ಎಂದು ಸಮೀಕ್ಷೆ ಹೇಳಿದೆ.

 ಜಾರ್ಖಂಡ್‌ನಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿವೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಇದೆ.

ಜಾರ್ಜಂಡ್‌ನಲ್ಲಿ ಬಾಲ್ಯ ವಿವಾಹಗಳು ಗ್ರಾಮೀಣ ಪ್ರದೇಶಗಳಲ್ಲಿ ಶೇ.7.3 ಹಾಗೂ ನಗರ ಪ್ರದೇಶಗಳಲ್ಲಿ ಶೇ.3 ಇವೆ.

ಪಶ್ಚಿಮ ಬಂಗಾಳದಲ್ಲಿ 54.9 ಪ್ರತಿಶತದಷ್ಟು ಹುಡುಗಿಯರು 21 ವಯಸ್ಸಿಗೆ ಬರುವ ಮೊದಲೇ ವಿವಾಹ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ಪ್ರಕಾರ, 2015 ರಲ್ಲಿ ಜಾರ್ಖಂಡ್‌ನಲ್ಲಿ ಮಾಟಮಂತ್ರ ಆರೋಪದ ಮೇಲೆ 32, 2016 ರಲ್ಲಿ 27, 2017 ರಲ್ಲಿ 19, 2018, 2019 ಮತ್ತು 2020ರಲ್ಲಿ ತಲಾ 15 ಜನರನ್ನು ಕೊಲ್ಲಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top