ನವದೆಹಲಿ: ಉತ್ತರಪ್ರದೇಶದ ಫೈಜಾಬಾದ್ ಕ್ಯಾಂಟ್ ರೈಲು ನಿಲ್ದಾಣದ ಹೆಸರನ್ನು ಅಯೋಧ್ಯಾ ಕ್ಯಾಂಟ್ ಎಂದು ಬದಲಾಯಿಸುವ ಪ್ರಸ್ತಾಪಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ. ಈ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಯುಪಿಯ ಯೋಗಿ ಸರ್ಕಾರ ಕೂಡ ಫೈಜಾಬಾದ್ ಹೆಸರನ್ನು ಅಯೋಧ್ಯೆ ಎಂದು ಬದಲಾಯಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನ ನಂತರ 5 ಆಗಸ್ಟ್ 2020 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಶಂಕುಸ್ಥಾಪನೆ ಮಾಡಿದರು. ಅಂದಿನಿಂದ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಫೈಜಾಬಾದ್ ಕ್ಯಾಂಟ್ ರೈಲು ನಿಲ್ದಾಣದ ಹೆಸರನ್ನು ಅಯೋಧ್ಯಾ ಕ್ಯಾಂಟ್ ಎಂದು ಬದಲಾಯಿಸಲಾಗುತ್ತಿದೆ.
Correction | Defence minister Rajnath Singh approves the proposal to change the name of Faizabad Cantt to Ayodhya Cantt: Sources pic.twitter.com/OqaViTAG2e
— ANI (@ANI) October 4, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.