News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಮಾವೃತ ಶಿವ ಮಂದಿರದ ಅದ್ಭುತ ವಿಡಿಯೋ ಹಂಚಿಕೊಂಡ ನಾರ್ವೆ ರಾಜತಾಂತ್ರಿಕ

ನವದೆಹಲಿ: ಡ್ರೋನ್ ಮೂಲಕ ಸೆರೆ ಹಿಡಿದಿರುವ ಹಿಮಾಲಯದ ಅತಿ ಎತ್ತರದಲ್ಲಿರುವ ಶಿವ ದೇಗುಲದ ವಿಸ್ಮಯಕಾರಿ ನೋಟವನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ನಾರ್ವೆ ರಾಜತಾಂತ್ರಿಕ ಎರಿಕ್ ಸೊಲ್ಹೈಮ್ ಅವರು ‘ಇನ್ಕ್ರೆಡಿಬಲ್ ಇಂಡಿಯಾ’ದ ಸೊಬಗಿಗೆ ಮಾರು ಹೋಗಿರುವುದಾಗಿ ಬಣ್ಣಿಸಿದ್ದಾರೆ.

ಸೋಲ್ಹೈಮ್ ಭಾನುವಾರ ಟ್ವಿಟರ್‌ನಲ್ಲಿ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ ಮತ್ತು ಇದು ಅತ್ಯಧಿಕ ವೀಕ್ಷಣೆ ಮತ್ತು ‌ಲೈಕ್‌ಗಳನ್ನು ಪಡೆದುಕೊಂ

“ಇನ್‌ಕ್ರೆಡಿಬಲ್ ಇಂಡಿಯಾ! ವಿಶ್ವದ ಅತಿ ಎತ್ತರದ ಮಹಾದೇವ ಮಂದಿರ.., 5000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ! ಉತ್ತರಾಖಂಡ,” ಎಂದು ಎರಿಕ್ ಪೋಸ್ಟ್‌ಗೆ ಒಕ್ಕಣೆ ನೀಡಿದ್ದಾರೆ.

ಅದ್ಭುತವಾದ ವಿಡಿಯೋದಲ್ಲಿ ಸಂಪೂರ್ಣವಾಗಿ ಹಿಮದಿಂದ ಆವೃತವಾದ ಪರ್ವತಗಳಲ್ಲಿ ನೆಲೆಗೊಂಡಿರುವ ಶಿವ ದೇವಾಲಯದ 360-ಡಿಗ್ರಿ ವೈಮಾನಿಕ ನೋಟವನ್ನು ಸೆರೆಹಿಡಿಯಲಾಗಿದೆ.

‘ಕೇದಾರನಾಥ್’ ಚಿತ್ರದ “ನಮೋ ನಮೋ” ಎಂಬ ಪಠಣ ಹಾಡು ಕೂಡ ವೀಡಿಯೊದ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ.

ಈ ಪೋಸ್ಟ್ ತಕ್ಷಣ ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದ್ದು, ಕೆಲವು ನೆಟಿಜನ್‌ಗಳು ಅದ್ಭುತವಾದ ನೋಟದ ಸೌಂದರ್ಯಕ್ಕೆ ಮಾರುಹೋಗಿದ್ದಾರೆ.

“ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದೆ, ಇದು ಹಿಮಪಾತಗಳು ಮತ್ತು ಭೂಕಂಪಗಳನ್ನು ಸಹ ಮೆಟ್ಟಿನಿಂತು ಉಳಿದುಕೊಂಡಿದೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “

ತುಂಗನಾಥ ಮಹಾದೇವ ದೇವಾಲಯ, ಪಂಚ ಕೇದಾರಗಳಲ್ಲಿ ಒಂದಾಗಿದೆ. ದೇವಾಲಯಕ್ಕೆ ಚಾರಣವು ಅದ್ಭುತವಾಗಿದೆ. ಸ್ವಲ್ಪ ಮೇಲಿರುವ ಚಂದ್ರಶಿಲಾದಿಂದ ಹಿಮಾಲಯದ ಶಿಖರಗಳು 270-ಡಿಗ್ರಿ ವಿಶಾಲವಾದ ನೋಟವನ್ನು ಹೊಂದಿವೆ. ಅದ್ಭುತ ಭಾರತ” ಎಂದು ಮತ್ತೊಬ್ಬರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top