ಜೈಪುರ: ಧ್ವನಿವರ್ಧಕ ನಿಯಮಗಳಿಗೆ ಕಟ್ಡುಬಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಜಸ್ಥಾನದ ಸಿರೋಹಿಯ ಅಬು ರೋಡ್ ಪ್ರದೇಶದಲ್ಲಿ ಸಮಾವೇಶವನ್ನು ರದ್ದುಪಡಿಸಿದ್ದಾರೆ. ಮೋದಿ ಸಮಾವೇಶದ ಸ್ಥಳ ತಲುಪುವಾಗ ರಾತ್ರಿ 10 ಗಂಟೆಯಾಗಿತ್ತು. ನಿಯಮಗಳ ಪ್ರಕಾರ 10 ಗಂಟೆಯ ಬ:ಿಲ ಧ್ವನಿವರ್ಧಕ ಬಳಸುವಂತಿಲ್ಲ.
ಆದರೆ ಮೈಕ್ ಬಳಸದೆಯೇ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮೋದಿ ಒಂದಿಷ್ಟು ಮಾತುಗಳನ್ನಾಡಿ ಸಮಾವೇಶ ನಡೆಸಲು ಅಸಾಧ್ಯವಾಗುತ್ತಿರುವುದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.
ಭಾಷಣ ಮಾಡಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದ ಅವರು ಮತ್ತೆ ಸಿರೋಹಿಗೆ ಬರುವುದಾಗಿ ಭರವಸೆ ನೀಡಿದರು.
“ನಾನು ಇಲ್ಲಿಗೆ ತಲುಪಲು ತಡವಾಯಿತು. ರಾತ್ರಿ 10 ಗಂಟೆಯಾಗಿದೆ. ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ನನ್ನ ಆತ್ಮಸಾಕ್ಷಿಯು ಹೇಳುತ್ತಿದೆ. ಹಾಗಾಗಿ ನಿಮ್ಮ ಮುಂದೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಮೋದಿ ಮೈಕ್ ಇಲ್ಲದೆ ಮಾತನಾಡುತ್ತಾ ಹೇಳಿದರು.
“ನಾನು ಮತ್ತೆ ಇಲ್ಲಿಗೆ ಬರುತ್ತೇನೆ ಮತ್ತು ನೀವು ನನಗೆ ನೀಡಿದ ಪ್ರೀತಿ ಮತ್ತು ವಾತ್ಸಲ್ಯವನ್ನು ಬಡ್ಡಿಯೊಂದಿಗೆ ಮರುಪಾವತಿಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ಅವರು ಹೇಳಿದರು.
ಗುಜರಾತ್ನೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದಕ್ಷಿಣ ರಾಜಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಸಂದೇಶವನ್ನು ನೀಡಲು ಈ ಸಮಾವೇಶವನ್ನು ಯೋಜಿಸಲಾಗಿತ್ತು ಎಂದು ಹೇಳಲಾಗಿದೆ.
PM Modi decided against addressing the public meeting at Abu Road because it was well past stipulated time.
This was 7th program of the day. Earlier he flagged and took a ride on Vande Bharat and Ahemdabad Metro, prayed at Ambaji among others.
He is 72 and fasting for Navratri! pic.twitter.com/UWiotbehQm
— Amit Malviya (@amitmalviya) September 30, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.