ನವದೆಹಲಿ: ಮಾಲ್ಡೀವ್ಸ್ಗೆ ಭಾರತ ನೀಡಿದ ಅನುದಾನದ ನೆರವಿಗೆ ಕೃತಜ್ಞತೆ ವ್ಯಕ್ತಪಡಿಸಿರುವ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಈ ನೆರವು ದ್ವೀಪ ರಾಷ್ಟ್ರದಲ್ಲಿ ಮೂಲಭೂತ ಸೇವೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
“ನಮ್ಮ ದ್ವೀಪ ರಾಷ್ಟ್ರದಲ್ಲಿ ಮೂಲಭೂತ ಸೇವೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದಿಂದ ಮಾಲ್ಡೀವ್ಸ್ಗೆ ಸಹಾಯಧನವು ಪ್ರಮುಖವಾಗಿದೆ. ಈ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾದ ಬಿ.ಧರವಂಧೂ ತುರ್ತು ವೈದ್ಯಕೀಯ ಸೇವೆಗಳ ಘಟಕವು ನಮ್ಮ ವೈದ್ಯಕೀಯ ಸೇವೆಗಳನ್ನು ವಿಸ್ತರಿಸುವಲ್ಲಿ ಒಂದು ಹೆಜ್ಜೆ ಮುಂದಿದೆ” ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವರು ಟ್ವೀಟ್ ಮಾಡಿದ್ದಾರೆ.
ಮಾಲ್ಡೀವ್ಸ್ನಲ್ಲಿ ತುರ್ತು ಮತ್ತು ಟ್ರಾಮಾ ಘಟಕವನ್ನು ಉದ್ಘಾಟಿಸಿದ ಬಳಿಕ ಅವರು ಈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಭಾರತದ ನೆರವಿನೊಂದಿಗೆ ಸ್ಥಾಪನೆ ಮಾಡಲಾಗಿದೆ. ಜಂಟಿ ಧನಸಹಾಯದ ಯೋಜನೆಗಳನ್ನು ಎರಡು ದೇಶಗಳ ಜನರ ನಡುವಿನ ಸ್ನೇಹದ ಸಂಕೇತವೆಂದು ಅವರು ಬಣ್ಣಿಸಿದ್ದಾರೆ.
“ಬಿ.ಧರವಂಧೂ ಹೆಲ್ತ್ ಸೆಂಟರ್ನಲ್ಲಿ ತುರ್ತು ಮತ್ತು ಆಘಾತ ಘಟಕದ ಉದ್ಘಾಟನೆ ಮಾಲ್ಡೀವ್ಸ್ ಮತ್ತು ಭಾರತದ ಜನರ ನಡುವಿನ ಸ್ನೇಹದ ಸಂಕೇತವಾಗಿದೆ, ಮಾಲ್ಡೀವ್ಸ್ ಸರ್ಕಾರ ಮತ್ತು ಭಾರತ ಸರ್ಕಾರವು ಜಂಟಿಯಾಗಿ ಧನಸಹಾಯ ಮಾಡಿದ ಯೋಜನೆಯಾಗಿದೆ” ಎಂದು ಮಾಲ್ಡೀವ್ಸ್ ಆರೋಗ್ಯ ಸಚಿವಾಲಯ ಬುಧವಾರ (ಸೆ. 28) ಟ್ವೀಟ್ನಲ್ಲಿ ತಿಳಿಸಿದೆ.
ಟ್ರಾಮಾ ಘಟಕವು ಜನಕೇಂದ್ರಿತ ಅನುದಾನ ಯೋಜನೆಗಳಿಗೆ ಮತ್ತೊಂದು ಉಜ್ವಲ ಉದಾಹರಣೆಯಾಗಿದೆ ಎಂದು ಅಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.
Grant assistance from 🇮🇳 to 🇲🇻 has been pivotal in developing basic services in our island communities.
The Emergency Medical Services unit inaugurated in B.Dharavandhoo, that was developed under this scheme is a step forward in broadening our medical services. pic.twitter.com/Xz9jcdx01u
— Abdulla Shahid (@abdulla_shahid) September 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.