ಬೆಗುಸರೈ: ತನ್ನ ವಿದ್ಯಾಭ್ಯಾಸಕ್ಕೆ ತಡೆ ಹಾಕಿದ ತಂದೆಗೆ ಮಗಳೊಬ್ಬಳು ತಕ್ಕ ಪಾಠವನ್ನೇ ಕಲಿಸಿದ್ದಾಳೆ. ಉನ್ನತ ವ್ಯಾಸಂಗ ಮಾಡಲು ಬಿಡದ ತಂದೆಯ ವಿರುದ್ಧ ನಸುರತ್ ಎಂಬ ಯುವತಿ ಎಫ್ಐಆರ್ ದಾಖಲು ಮಾಡಿದ್ದಾಳೆ.
ಬಿಹಾರದ ಬೆಗುಸರೈನ ಬರೋ ಗ್ರಾಮದವಳಾದ ಹುಡುಗಿ 10ನೇ ತರಗತಿ ಪಾಸು ಮಾಡಿದ್ದಾಳೆ. ಮತ್ತೆ ಕಲಿಯಬೇಕೆಂನ ಮಹದಾಸೆ ಹೊಂದಿದ್ದರೂ ಆಕೆಯ ತಂದೆ ಅದಕ್ಕೆ ಬಿಡುತ್ತಿಲ್ಲ. ಆತನ ಒತ್ತಡದ ನಡುವೆಯೂ ಆಕೆ ಉನ್ನತ ವ್ಯಾಸಂಗಕ್ಕೆ ಬೇಕಾದ ಅರ್ಹತಾ ಪ್ರಮಾಣಪತ್ರವನ್ನು ತಂದಿದ್ದಳು. ಅದನ್ನೂ ಆಕೆಯ ತಂದೆ ಸುಟ್ಟು ಹಾಕಿದ್ದಾನೆ.
ಅಷ್ಟೇ ಅಲ್ಲದೇ ತಂದೆ ಅಬ್ದುಲ್ ವಾಹಾಬ್ ಮತ್ತು ಆತನ ಸಹೋದರ ಈಕೆಯ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ಇದರಿಂದ ಕುಪಿತಳಾದ ಹುಡುಗಿ ಬೇರೆ ದಾರಿ ಕಾಣದೆ ತನ್ನ ಹೆತ್ತ ತಂದೆಯ ವಿರುದ್ಧವೇ ಪೊಲೀಸ್ ಠಾಣೆಗೆ ತೆರಳಿ ಎಫ್ಐಆರ್ ದಾಖಲು ಮಾಡಿದ್ದಾಳೆ.
ತನ್ನ ಮಗಳು ಉನ್ನತ ವ್ಯಾಸಂಗ ಮಾಡಬೇಕೆಂದು ನಸುರತ್ ತಾಯಿ ಬಯಸುತ್ತಿದ್ದಾರೆ. ಮಗಳಿಗೆ ಬೆಂಬಲವನ್ನೂ ನೀಡಿದ್ದಾರೆ. ಆದರೆ ತಂದ ಎನಿಸಿಕೊಂಡವನು ಮಾತ್ರ ಮಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಆದರೆ ಆತನ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ನಸುರತ್ ಉತ್ತಮ ಕಾರ್ಯವನ್ನೇ ಮಾಡಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.